ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ನ ಮೇಲೆ ಗಡಿ ಭದ್ರತಾ ಪಡೆ(ಬಿಎಸ್ಎಫ್) ಶನಿವಾರ ಗುಂಡಿನ ದಾಳಿ ನಡೆಸಿದ್ದು, ಶಸ್ತ್ರಾಸ್ತ್ರಗಳು ಅಥವಾ ಮಾದಕ ವಸ್ತುಗಳನ್ನು ರವಾನಿಸಿರುವುದನ್ನು ಖಚಿತಪಡಿಸಿಕೊಳ್ಳಲು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾ. 5ರ ಮುಂಜಾನೆ 4.10 ರ ಸುಮಾರಿಗೆ ಅರ್ನಿಯಾದಲ್ಲಿ ಶಂಕಿತ ಡ್ರೋನ್ ಹಾರಾಡುವುದನ್ನು ಗಮನಿಸಿದ ಬಿಎಸ್ಎಫ್ ಗುಂಡು ಹಾರಿಸಿದ್ದು ಪೊಲೀಸರ ನೆರವಿನಿಂದ ಪ್ರದೇಶವನ್ನು ಸುತ್ತುವರಿದು, ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ನಂತರ 10 ನಿಮಿಷಗಳ ಅವಧಿಯಲ್ಲಿ ಬಿಎಸ್ಎಫ್ ಪಡೆಗಳು ಸುಮಾರು 18 ಸುತ್ತು ಗುಂಡು ಹಾರಿಸಿತ್ತು ಎಂದು ಹೇಳಿದರು. ಫೆ. 24ರಂದು ಡ್ರೋನ್ ನಿಂದ ಆರ್ಎಸ್ ಪುರ ಸೆಕ್ಟರ್ ನಲ್ಲಿ ಡ್ರೋನ್ ನಿಂದ ಲಷ್ಕರ್-ಎ-ತೈಬಾ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಹಲವಾರು ಶಸ್ತ್ರಾಸ್ತ್ರಗಳ ರವಾನೆಯನ್ನು ಪೋಲಿಸರು ಪತ್ತೆಹಚ್ಚಿದ್ದರು.
ಜಮ್ಮು: ಶಂಕಿತ ಪಾಕ್ ಡ್ರೋನ್ ಮೇಲೆ ಬಿಎಸ್ಎಫ್ ನಿಂದ ಗುಂಡಿನ ದಾಳಿ
Recent Comments
ಕಗ್ಗದ ಸಂದೇಶ
on