Wednesday, July 6, 2022
spot_img
Homeಸ್ಥಳೀಯ ಸುದ್ದಿಜೇಸಿಐ ಕಾರ್ಕಳದ ನೂತನ ಅಧ್ಯಕ್ಷರಾಗಿ ಡಾ. ಮುರಳೀಧರ್‌ ಭಟ್

ಜೇಸಿಐ ಕಾರ್ಕಳದ ನೂತನ ಅಧ್ಯಕ್ಷರಾಗಿ ಡಾ. ಮುರಳೀಧರ್‌ ಭಟ್

ಕಾರ್ಕಳ : ಕಾರ್ಕಳ ಜೇಸಿಐಯ ನೂತನ ಅಧ್ಯಕ್ಷರಾಗಿ ಡಾ. ಮುರಳೀಧರ್‌ ಭಟ್‌ ಹಾಗೂ ಕಾರ್ಯದರ್ಶಿಯಾಗಿ ಶ್ವೆತಾ ಜೈನ್‌ ರೆಂಜಾಳ ಅವರು ಆಯ್ಕೆಯಾಗಿರುತ್ತಾರೆ. ಕೋಶಾಧಿಕಾರಿಯಾಗಿ ವಿಘ್ನೇಶ್‌ ಪ್ರಸಾದ್‌, ಉಪಾಧ್ಯಕ್ಷರಾಗಿ ಶ್ರೀಶಾ ಭಟ್‌, ರೇವತಿ ಶೆಟ್ಟಿ, ಸೂರಜ್‌ ಶೆಟ್ಟಿ, ಅವಿನಾಶ್‌ ಶೆಟ್ಟಿ, ಗಿರೀಶ್‌ ಕಿಣಿ, ಜೊತೆ ಕಾರ್ಯದರ್ಶಿಯಾಗಿ ಪ್ರಚಿತ್‌ ಕುಮಾರ್‌, ನಿರ್ದೇಶಕರಾಗಿ ರಾಮಚಂದ್ರ ನೆಲ್ಲಿಕಾರು, ರಾಘವೇಂದ್ರ ಸಾಲ್ಯಾನ್‌, ದಿನೇಶ್‌ ನಾಯಕ್,‌ ನವೀನ್‌ ಲೋಬೋ, ಸೂರಜ್‌ ಜೈನ್‌, ಮೋಹನ್‌ ಪ್ರಭು, ದಿನೇಶ್‌ ಆಚಾರ್ಯ, ಹಿತೇಶ್‌ ಶೆಟ್ಟಿ, ವಿಖ್ಯಾತ್‌ ಶೆಟ್ಟಿ, ಚೇತನಾ ಸಂಪಾದಕಿ ದಿವ್ಯಸ್ಮಿತಾ ಮರುಳೀಧರ್, ಜೂನಿಯರ್‌ ಜೇಸಿ ಅಧ್ಯಕ್ಷ ಸುಶಾಂತ್‌ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಪದಪ್ರದಾನ ಸಮಾರಂಭ
ಮಾ. 7ರಂದು ಜೇಸಿಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಜೆ 7 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದ್ದು, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಜೇಸಿ ವಲಯ 15ರ ವಲಯಾಧ್ಯಕ್ಷ ರಾಯನ್‌ ಉದಯ ಕ್ರಾಸ್ತ, ಪೂರ್ವ ರಾಷ್ಟ್ರೀಯ ನಿರ್ದೇಶಕರಾದ ಜಾನ್‌ ಆರ್.‌ ಡಿʼಸಿಲ್ವಾ, ಜೇಸಿಸ್‌ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಚಿತ್ತರಂಜನ್‌ ಶೆಟ್ಟಿ, ವಲಯ ಉಪಾಧ್ಯಕ್ಷ ದೀಪಕ್‌ ಗಂಗೂಲಿ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಜೇಸಿಐ ಕಾರ್ಕಳ ಪ್ರಕಟನೆ ತಿಳಿಸಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!