ಬೆಂಗಳೂರು : ಸರಕಾರದ ನಿಯಂತ್ರಣದಿಂದ ರಾಜ್ಯದ ದೇವಾಲಯಗಳನ್ನು ಮುಕ್ತಗೊಳಿಸಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಕೊಡಬೇಕು ಎಂಬ ವಿಚಾರವನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಬೊಮ್ಮಾಯಿ ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ವಿಶೇಷ ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ.
ದೇವಾಲಯಗಳ ಅರ್ಚಕರ, ನೌಕರರಿಗೆ ನೆರವಾಗಲು ಪ್ರಸ್ತುತ ತಸ್ತೀಕ್ ಮೊತ್ತವನ್ನು 48 ಸಾವಿರ ರೂ. ನಿಂದ 60 ಸಾವಿರ ರೂ. ಗಳಿಗೆ ಏರಿಸಿದ್ದು, ದೇವಾಲಯಗಳ ಸೇವೆಗಳು ಭಕ್ತಾದಿಗಳಿಗೆ ಆನ್ಲೈನ್ ಮೂಲಕ ಲಭ್ಯಪಡಿಸಲು ʼಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್ಮೆಂಟ್ ಸಿಸ್ಟಮ್” ತಂತ್ರಾಂಶವನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವೆ ವಲಯಗಳಿಗೆ ಕೊಡುಗೆ ನೀಡುತ್ತಿರುವ ಮಠಗಳು ಮತ್ತು ಸಂಸ್ಥೆಗಳಿಗೆ ಸರಕಾರದಿಂದ ನೆರವು ನೀಡಲಾಗುವುದು ಮತ್ತು ಆಂದ್ರಪ್ರದೇಶದ ಶ್ರೀ ಶೈಲದಲ್ಲಿ ಕರ್ನಾಟಕದ ಯಾತ್ರಿಗಳಿಗಾಗಿ “ಯಾತ್ರಿ ನಿವಾಸ ಸಂಕೀರ್ಣವನ್ನು 85 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತಗಳಲ್ಲಿ ನಿರ್ಮಿಸಲಾಗುವುದು. ಮಹಾರಾಷ್ಟ್ರದ ಪಂಡರಾಪುರಕ್ಕೆ ಹೋಗುವ ರಾಜ್ಯದ ಭಕ್ತಾದಿಗಳು ತಂಗಲು ಅತಿಥಿ ಗೃಹ ಅಭಿವೃದ್ದಿ ಪಡಿಸಲಾಗುತ್ತದೆ. ಪ್ರವಾಸದ ಅನುಕೂಲಕ್ಕಾಗಿ ಕೆಎಸ್ಟಿಡಿಸಿಯಿಂದ ರಿಯಾಯಿತಿ ದರದಲ್ಲಿ ಪ್ಯಾಕೇಜ್ ನಲ್ಲಿ ರೂಪಿಸಲಾಗಿದೆ. ಪ್ರಮುಖವಾಗಿ ಕಾಶಿಯಾತ್ರೆ ಕೈಗೊಳ್ಳುವ 30 ಸಾವಿರ ಯಾತ್ರಾರ್ಥಿಗಳಿಗೆ ಸರಕಾರದಿಂದ ತಲಾ 5 ಸಾವಿರ ರೂ. ಗಳ ಸಹಾಯಧನ ನೀಡಲಾಗುವುದು ಎಂದು ಬಜೆಟ್ನಲ್ಲಿ ಉಲ್ಲೇಖಿಸಿದ್ದಾರೆ.
ದೇವಾಲಯಗಳಿಗೆ ಸರಕಾರದ ನಿಯಂತ್ರಣದಿಂದ ಮುಕ್ತಿ : ಸಿಎಂ ಬೊಮ್ಮಾಯಿ
Recent Comments
ಕಗ್ಗದ ಸಂದೇಶ
on