ಆರೋಗ್ಯಧಾರ – ಅಧಿಕ ಬೆವರಿನ ಸಮಸ್ಯೆ ಇದೆಯೇ ?

ಬೆವರು ನಮ್ಮ ದೇಹದಲ್ಲಿನ ಕಲ್ಮಶವನ್ನು ತೆಗೆದುಹಾಕುತ್ತದೆ. ದೇಹದ ಉಷ್ಣಾಂಶ ಹೆಚ್ಚಾದರೆ ಅದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಅವಶ್ಯಕ. ಆದರೆ ಕೆಲವರಿಗೆ ಅಧಿಕ ಬೆವರುವ ಸಮಸ್ಯೆ ಕಾಡುವುದು. ಆದ್ದರಿಂದ ಮುಜುಗರವಾಗೋದು ಸಹಜ. ಅಧಿಕ ಬೆವರುವಿಕೆಯನ್ನು ಕಡಿಮೆ ಹೇಗೆ ಮಾಡಬಹುದೆಂದು ಇವತ್ತು ತಿಳಿದುಕೊಳ್ಳೋಣ.

ಕಾರಣಗಳು
ಬೇಸಿಗೆಯಲ್ಲಿ ಬೆವರು ಜಾಸ್ತಿ ಅದು ದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ಸಹಾಯಕ. ಸ್ವೇದವು ಪಿತ್ತದೋಷ ಪ್ರಕೋಪದಿಂದ ಆಗುವುದು. ಕೆಲವೊಮ್ಮೆ ಮಾನಸಿಕ ಉದ್ವೇಗ ಭಯದಿಂದ ಕೂಡ ಉದ್ಭವಿಸಬಹುದು. ಬೆವರು ಪಾದತಲ ಕಂಕುಳದಲ್ಲಿ ಅಧಿಕವಾಗಿ ಕಂಡುಬರುವುದು. ಡಯಾಬಿಟಿಸ್, ಹೈಪರ್ ಥೈರಾಯ್ಡಿಸಮ್, ಮೆನೋಪಾಸ್ (ಮುಟ್ಟು ನಿಲ್ಲುವ ಸಮಯದಲ್ಲಿ) ಬೆವರುವುದು ಜಾಸ್ತಿ. ಪಿತ್ತ ಪ್ರಕೃತಿಯವರಲ್ಲಿ, ಆಗೀಗ ವ್ಯಾಯಾಮ ಮಾಡಿ ಮಾಡಿದ್ದಲ್ಲಿ ಬೆವರುವಿಕೆ ಅಧಿಕ ಮೇದು ಧಾತು, ಬೊಜ್ಜು ಜಾಸ್ತಿಯಾದಂತೆ ಬೆವರು ಜಾಸ್ತಿಯಾಗುವುದು. ಬೆವರು ಜಾಸ್ತಿಯಾದರೆ ದೇಹದ ದುರ್ಗಂಧ ಕೂಡ ಜಾಸ್ತಿಯಾಗುವುದು.

ಬೆವರನ್ನು ಕಡಿಮೆ ಮಾಡುವ ಉಪಾಯಗಳು ಹೀಗಿವೆ
ಪಿತ್ತದೋಷವನ್ನು ವೃದ್ಧಿಸುವ ಆಹಾರ ಸೇವನೆ ಕಡಿಮೆ ಮಾಡಿ. ಉದಾಹರಣೆಗೆ ಬೆಳ್ಳುಳ್ಳಿ, ಈರುಳ್ಳಿ, ಚಕ್ಕೆ, ಲವಂಗ, ಮಸಾಲೆ ಪದಾರ್ಥಗಳು, ಚಾ, ಕಾಫಿ, ಜಿಡ್ಡಿನ ಪದಾರ್ಥಗಳು ಕಡಿಮೆ ಸೇವಿಸಿ. ಹಣ್ಣುಗಳಲ್ಲಿ ನೀರಿನಂಶ ಅಧಿಕವಿರುವ ಕಲ್ಲಂಗಡಿ, ದ್ರಾಕ್ಷಿ, ಕಿತ್ತಳೆ, ಮೋಸಂಬಿ ಸೇವಿಸಿ, ತರಕಾರಿಗಳಲ್ಲಿ ಸೌತೆಕಾಯಿ, ಬೂದಗುಂಬಳಕಾಯಿ, ಪಡವಳಕಾಯಿ ಹೆಚ್ಚಾಗಿ ಸೇವಿಸಿ. ಸುಪಾಚ್ಯ ಆಹಾರ, ಹಾಲು, ಬೆಣ್ಣೆ, ತುಪ್ಪವನ್ನು ಅಧಿಕವಾಗಿ ಸೇವಿಸಿ. ನೀರನ್ನು ಸರಿಯಾಗಿ ಕುಡಿಯಿರಿ. ರಾತ್ರಿ ಏಳರಿಂದ ಎಂಟು ಗಂಟೆಗಳ ಕಾಲ ಒಳ್ಳೆಯ ನಿದ್ದೆ ಮಾಡಿರಿ. ತಿಳಿ ಬಣ್ಣದ ಹತ್ತಿಯ ಉಡುಪನ್ನು ಧರಿಸಿ. ತಣ್ಣೀರಿನ ಸ್ನಾನ ಮಾಡಿದರೆ ಹಿತಕರ. ಯಾವುದೇ ರೋಗದಿಂದ ಬೆವರುವಿಕೆ ಜಾಸ್ತಿಯಾಗಿದ್ದರೆ ಅದರ ಚಿಕಿತ್ಸೆ ಅವಶ್ಯಕ.

ಸಾಮಾನ್ಯವಾಗಿ ಕಂಡುಬರುವ ಅಧಿಕ ಬೆವರುವಿಕೆಗೆ ಮನೆ ಮದ್ದು
• ರಾತ್ರಿ ಹತ್ತರಿಂದ ಹನ್ನೆರಡು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.
• ರಾತ್ರಿ ಎರಡು ಚಮಚ ಕೊತ್ತಂಬರಿ ಬೀಜವನ್ನು ಜಜ್ಜಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಸೋಸಿ ಅದನ್ನ ಸೇವಿಸಿರಿ.
• ಕುಡಿಯುವ ನೀರಿಗೆ ಲಾವಂಚದ ಬೇರನ್ನು ಹಾಕಿ ದಿನಾಲು ಸೇವಿಸಿ.
• ಚಂದನಾದಿ ತೈಲ, ತೆಂಗಿನ ಎಣ್ಣೆಯನ್ನು ಹಚ್ಚಿ ಅಭ್ಯಂಗ ಸ್ನಾನ ಮಾಡಿರಿ.
• ಚಂದನದ ಚೂರ್ಣ ಅಥವಾ ರಕ್ತಚಂದನ ಅಥವಾ ಗೋಪಿಚಂದನ ನೀರಿನಲ್ಲಿ ಬೆರೆಸಿ ತ್ವಚೆಯ ಮೇಲೆ ಹಚ್ಚಿ ನಂತರ ಸ್ನಾನ ಮಾಡಿರಿ.
• ನೆಲ್ಲಿಕಾಯನ್ನು ದಿನಾಲು ಸೇವಿಸಿ.
• ಧ್ಯಾನ, ಪ್ರಾಣಾಯಾಮವನ್ನು ದಿನಾಲು ಮಾಡಿ. ಶೀತಲೀ ಪ್ರಾಣಾಯಾಮ ದೇಹದ ಉಷ್ಣವನ್ನು ಕಡಿಮೆಗೊಳಿಸುತ್ತದೆ. ಯೋಗಾಸನವನ್ನು ಮಾಡಿರಿ. ತಾಡಾಸನ, ಸುಪ್ತ ವಕ್ರಾಸನ, ಪವನಮುಕ್ತಾಸನ, ಹಸ್ತಪಾದಾಸನ ಮಾಡಿದರೆ ಒಳ್ಳೆಯದು.
• ಮನಸ್ಸನ್ನು ಶಾಂತವಾಗಿರಿಸಿ ಸಂತಸದಿಂದಿರಿ.
• ತುಳಸಿ ಎಲೆಯನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ.
• ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ಹಾಕಿ ಸೇವಿಸಿ.
• ಆಯುರ್ವೇದ ಔಷಧಗಳು – ಚಂದನಾಸವ, ಉಶೀರಾಸವ, ದ್ರಾಕ್ಷಾಸವ, ಸಾರಿಅದಿವಟಿ ಮುಂತಾದವುಗಳು ಆಯುರ್ವೇದ ವೈದ್ಯರನ್ನು ಕೇಳಿ ಸೇವಿಸಿ.

ಡಾ. ಹರ್ಷಾ ಕಾಮತ್





























































































































































































































error: Content is protected !!
Scroll to Top