Thursday, May 26, 2022
spot_img
Homeಸುದ್ದಿಪಿಡಿಒ ಅಮಾನತುಗೊಳಿಸುವಂತೆ ವಿನಯ ಕುಮಾರ್‌ ಸೊರಕೆ ಆಗ್ರಹ

ಪಿಡಿಒ ಅಮಾನತುಗೊಳಿಸುವಂತೆ ವಿನಯ ಕುಮಾರ್‌ ಸೊರಕೆ ಆಗ್ರಹ

ಕಾರ್ಕಳ : ಬಿಜೆಪಿ ಸರಕಾರದ ಅವಧಿಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಮೇಲೆ ದೂರು ದಾಖಲಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆ ಕಾರ್ಕಳದಲ್ಲಿ ನಡೆದಿದ್ದು, ಇದು ಖಂಡನೀಯ. ಕೂಡಲೇ ದೂರು ಹಿಂಪಡೆಯಬೇಕು. ಸದಸ್ಯರ ವಿರುದ್ಧ ದೂರು ದಾಖಲಿಸಿದ ಶಿರ್ಲಾಲು ಗ್ರಾಮ ಪಂಚಾಯತ್‌ ಅಧಿಕಾರಿಯವರನ್ನು ಅಮಾನತುಗೊಳಿಸಬೇಕೆಂದು ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಆಗ್ರಹಿಸಿದರು.
ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಮಾ. ೩ರಂದು ಶಿರ್ಲಾಲು ಪಂಚಾಯತ್‌ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಪಿಡಿಒ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯತ್‌ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌ ಪೂಜಾರಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ದಿನೇಶ್ ಶೆಟ್ಟಿ ಚಾರ, ಜನಾರ್ಧನ್ ಹೆಬ್ರಿ, ಚಂದ್ರಶೇಖರ್ ಬಾಯರಿ, ಅಷ್ಟಿನ್ ರೋಡ್ರಿಗಸ್, ಸುನಿತಾ ಶೆಟ್ಟಿ, ವಿಶು ಕುಮಾರ್, ಯಶೋದಾ ಶೆಟ್ಟಿ ಅಜೆಕಾರ್, ಜಯಕುಮಾರ್ ಜೈನ್ ಶಿರ್ಲಾಲ್, ಕೃಷ್ಣ ಶೆಟ್ಟಿ ಬರ್ನಾನಂಥಲ್, ಅಸ್ಲಾಂ ಕಾರ್ಕಳ, ಪ್ರಕಾಶ್ ಕೆರ್ವಾಷೆ, ಐಟಿ ಸೆಲ್ ನ ಸತೀಶ್ ಕಾರ್ಕಳ, ಸಂತೋಷ್ ಹೆಬ್ರಿ, ದಯಾನಂದ ದುರ್ಗಾ, ಪುಷ್ಪರಾಜ್ ಶೆಟ್ಟಿ ಅಜೆಕಾರ್, ರಘುನಾಥ್ ಮುನಿಯಾಲು, ಶಶಿಕಲಾ ಆರ್.ಪಿ., ಶಶಿಕಲಾ ಮುದ್ರಾಡಿ, ಲಕ್ಷ್ಮಣ ಆಚಾರ್ಯ ವರಂಗ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!