ಬೆಂಗಳೂರು : ಕಾಂಗ್ರೆಸ್ ತನ್ನ ಅಧಿಕಾರದ ಐದು ವರ್ಷದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಲಿಲ್ಲ. ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಅಸಹಾಯಕತೆ ತೋರಿದವರು ಇಂದು ಪಾದಯಾತ್ರೆ ಹೊರಟಿದ್ದಾರೆ ಎಂದು ಸಚಿವ ವಿ. ಸುನಿಲ್ ಕುಮಾರ್ ಕಿಡಿಕಾರಿದರು.
ಮಾ.3 ರಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊದಲ ಪಾದಯಾತ್ರೆಯಲ್ಲಿ ಕೋವಿಡ್ ಹಬ್ಬಿಸಿ, ಎರಡನೇ ಹಂತದ ಪಾದಯಾತ್ರೆಯಲ್ಲಿ ಟ್ರಾಫಿಕ್ ಜಾಮ್ ಗೆ ಕಾರಣರಾಗುತ್ತಿದ್ದಾರೆ. ಬಿಜೆಪಿ ಸರ್ಕಾರ ನ್ಯಾಯಾಲಯದ ತೀರ್ಪು ನೋಡಿಕೊಂಡು ಯೋಜನೆಗೆ ಬದ್ದತೆ ತೋರುತ್ತದೆ ಎಂದರು. ಬಳಿಕ ರಷ್ಯಾ ಉಕ್ರೇನ್ ಯುದ್ದದ ಬಗ್ಗೆ ಮಾತನಾಡಿದ ಅವರು, ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮ ಕೈಗೊಂಡಿದ್ದು ಮೂರುವರೆ ಸಾವಿರ ವಿದ್ಯಾರ್ಥಿಗಳನ್ನು ಈಗಾಗಲೇ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡದೇ ಎಲ್ಲರೂ ಒಂದಾಗಿದ್ದು, ಸಲಹೆಗಳನ್ನು ನೀಡಬೇಕೇ ಹೊರತು ಬೀದಿಗಿಳಿದು ರಂಪಾಟ ಮಾಡುವುದಲ್ಲ ಎಂದು ಗುಡುಗಿದರು.