ರಷ್ಯಾದಿಂದ ಭೀಕರ ದಾಳಿ ಹಿನ್ನೆಲೆಯಲ್ಲಿ ನಾಗರೀಕರ ಜೀವ ಉಳಿಸಲು ಖೇರ್ಸನ್ ನಲ್ಲಿ ಉಕ್ರೇನ್ ಸೇನೆ ರಷ್ಯಾಗೆ ಶರಣಾಗತಿಯಾಗಿದೆ. ರಷ್ಯಾ ಇಂದು ಮುಂಜಾನೆಯೇ ಉಕ್ರೇನ್ ಮೇಲೆ ರಾಕೆಟ್ ಮತ್ತು ಕ್ಷಿಪಣಿ ಧಾಳಿ ಮಾಡಿ ಹಲವು ಮಿಲಿಟರಿ ಕಟ್ಟಡಗಳನ್ನು ಧ್ವಂಸ ಮಾಡಿದೆ. ಹೀಗಾಗಿ ಸೈನಿಕರು ನಾಗರಿಕರ ಜೀವ ಉಳಿಸಲು ಶರಣಾಗಿದ್ದಾರೆಂದು ತಿಳಿದುಬಂದಿದೆ. ರಷ್ಯಾ ಖೆರ್ಸನ್ ನಗರ , ಕೀವ್, ಕಾರ್ಖೀವ್ ಆವರಿಸಿಕೊಂಡಿದ್ದು, ಖೇರ್ಸನ್ ನಗರವನ್ನು ಸುತ್ತುವರೆದಿದೆ ಎಂದು ಖೇರ್ಸನ್ ರಾಜ್ಯಪಾಲರಿಂದಲೇ ಅಧಿಕೃತ ಮಾಹಿತಿ ಬಂದಿದೆ. ಈ ನಡುವೆ ಉಕ್ರೇನ್ ರಾಜಧಾನಿ ಕೀವ್ನಲ್ಲಿ ರಷ್ಯಾ ಕ್ಷಿಪಣಿ ದಾಳಿ ಮುಂದುವರೆಸಿದೆ. ದಕ್ಷಿಣ ರೈಲ್ವೆ ಸ್ಟೇಷನ್, ರಕ್ಷಣಾ ಸಚಿವಾಲಯದ ಬಳಿ ದಾಳಿ ಮಾಡಲಾಗಿದೆ. ರಾಜಧಾನಿ ಕೀವ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Recent Comments
ಕಗ್ಗದ ಸಂದೇಶ
on