Thursday, May 19, 2022
spot_img
Homeಸುದ್ದಿಕಾರ್ಕಳ ಉತ್ಸವ ಸುವ್ಯವಸ್ಥೆಗೆ 500 ಪೊಲೀಸರ ನಿಯೋಜನೆ

ಕಾರ್ಕಳ ಉತ್ಸವ ಸುವ್ಯವಸ್ಥೆಗೆ 500 ಪೊಲೀಸರ ನಿಯೋಜನೆ

ಕಾರ್ಕಳ : ಕಾರ್ಕಳದ ಐತಿಹಾಸಿಕ ಕ್ಷಣವಾಗಲಿರುವ ಕಾರ್ಕಳ ಉತ್ಸವದ ಸುವ್ಯವಸ್ಥೆಗೆ ಸುಮಾರು 500 ಪೊಲೀಸರ ನಿಯೋಜನೆಯಾಗಲಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ. ಮಾ. 10ರಿಂದ 20ರವರೆಗೆ 10 ದಿನಗಳ ಕಾಲ ನಡೆಯುವ ಉತ್ಸವ ವೇಳೆ ಪಾರ್ಕಿಂಗ್‌, ಸಂಚಾರ ನಿಯಂತ್ರಣ, ಸಭಾ ಕಾರ್ಯಕ್ರಮದ ಸ್ಥಳ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸಿವಿಲ್‌, ಡಿಎಆರ್‌ ಸೇರಿದಂತೆ 500 ಪೊಲೀಸರ ನಿಯೋಜನೆಯಾಗಲಿದ್ದು, ಎಸ್‌ಪಿ ವಿಷ್ಣುವರ್ಧನ್‌ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್‌ ನೇತೃತ್ವದಲ್ಲಿ ಬಂದೋಬಸ್ತ್‌ ವ್ಯವಸ್ಥೇ ನಡೆಯಲಿದೆ.

ಮಾ. 18ರಂದು ಸಂಜೆ 3ರಿಂದ ಬಂಡಿಮಠದಿಂದ ಸ್ವರಾಜ್‌ ಮೈದಾನವರೆಗೆ ನಡೆಯಲಿರುವ ಉತ್ಸವ ಮೆರವಣಿಗೆಗೆ ಮತ್ತಷ್ಟು ಹೆಚ್ಚಿನ ಪೊಲೀಸರ ನಿಯೋಜನೆಯಾಗಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!