Tuesday, July 5, 2022
spot_img
Homeಸ್ಥಳೀಯ ಸುದ್ದಿಮಾಳ : 18ನೇ ವರ್ಷದ ಭಜನಾ ಮಂಗಳೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

ಮಾಳ : 18ನೇ ವರ್ಷದ ಭಜನಾ ಮಂಗಳೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

ಮಾಳ : ಮಾಳ ಪ್ರಗತಿ ನಗರ ಮಂಜುಶ್ರೀ ಭಜನಾ ಮಂಡಳಿಯ 18ನೇ ವರ್ಷದ ಭಜನಾ ಮಂಗಳೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಮಾ. 2 ರಂದು ಸಂಜೆ 7:30ರಿಂದ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ

ರಾತ್ರಿ 7.30 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುಶ್ರೀ ಭಜನಾ ಮಂಡಳಿಯ ಗೌರವಾಧ್ಯಕ್ಷ ದಿನೇಶ್‌ ಶೆಟ್ಟಿ ವಹಿಸಲಿದ್ದು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುನಿರಾಜ್‌ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡಲಿರುವರು. ಭವಾನಿ ಶಿಪ್ಪಿಂಗ್‌ ಪ್ರೈ.ಲಿ. ನ ಮಾಲಕ ಕುಸುಮಾಧರ್‌ ದೇರಣ್ಣ ಶೆಟ್ಟಿ, ಕರ್ನಾಟಕ ರಾಜ್ಯ ಫೆಡರೇಶನ್‌ ಆಫ್‌ ಸ್ಟೋನ್‌ ಮತ್ತು ಕ್ರಷರ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಉದ್ಯಮಿಗಳಾದ ಸದಾನಂದ ನಾಯಕ್‌, ಆನಂದ್‌ ಶೆಟ್ಟಿ, ಚಿರಾಯು ಕ್ಲಿನಿಕ್‌ ಡಾ. ಪ್ರಶಾಂತ್‌ ಜೈನ್‌, ಜಿ. ಪಂ. ನಿಕಟಪೂರ್ವ ಸದಸ್ಯ ಉದಯ್‌ ಎಸ್‌. ಕೋಟ್ಯಾನ್‌, ಜಯ ಶೆಟ್ಟಿ, ಜೆ.ಸಿ.ಐ ಭಾರತ ವಲಯ 4ರ ವಲಯ ನಿರ್ದೇಶಕ ಸಂತೋಷ್‌ ಪೂಜಾರಿ, ಹೆಪೆಜಾರು ಮಾರುತಿ ಕ್ಯಾಶ್ಯೂ ಮಾಲಕ ಪ್ರಶಾಂತ್‌ ಶೆಟ್ಟಿ ಉಪಸ್ಥಿತರಿರುವರು.

ಯಕ್ಷಗಾನ
ಸಂಜೆ 6.30 ರಿಂದ ಬೆಂಕಿನಾಥೇಶ್ವರ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ತುಳು ಯಕ್ಷಗಾನ ʼಸತ್ಯದ ಸ್ವಾಮಿ ಕೊರಗಜ್ಜʼ ತುಳು ಯಕ್ಷಗಾನ ನಡೆಯಲಿದ್ದು, ಸಂಜೆ 6 ಗಂಟೆಗೆ ಚೌಕಿ ಪೂಜೆ ಜರುಗಲಿದೆ. ಸಭಾ ಕಾರ್ಯಕ್ರಮ ಹಾಗೂ ಯಕ್ಷಗಾನ ನ್ಯೂಸ್‌ ಕಾರ್ಕಳದಲ್ಲಿ ನೇರಪ್ರಸಾರಗೊಳ್ಳಲಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!