ಕಾರ್ಕಳ : ಮಹಿಳಾ ಪೊಲೀಸ್ ಓರ್ವರು ಕರ್ತವ್ಯ ಮುಗಿಸಿ ಮನೆ ಕಡೆ ತೆರಳಲು ಕಾರ್ಕಳ ಬಂಗ್ಲೆಗುಡ್ಡೆ ಜಂಕ್ಷನ್ ಬಳಿ ಬಸ್ಗಾಗಿ ಕಾಯುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಪೊಲೀಸ್ ಅವರಲ್ಲೇ ಬರ್ತಿಯಾ ಹೋಗುವಾ ಎಂದು ಅಸಭ್ಯವಾಗಿ ಹೇಳಿದ ಘಟನೆ ಫೆ. 28ರಂದು ನಡೆದಿದೆ. ಜಾರ್ಕಳ ಮೂಲದ ಪ್ರಶಾಂತ್ (42) ಹಾಗೂ ಪ್ರಮೋದ್ (43) ಎಂಬವರು ಬೈಕಿ ನಿಲ್ಲಿಸಿ, ಪ್ರಮೋದ್ ಬರ್ತೀಯಾ ಹೋಗುವಾ ಎಂದು ಅಸಭ್ಯವಾಗಿ ಕರೆದಿದ್ದು ಬಳಿಕ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪ್ರಶಾಂತ್ ನನ್ನು ಸಾರ್ವಜನಿಕರು ಅಡ್ಡಗಟ್ಟಿ ಹಿಡಿದಿದ್ದು, ಪ್ರಮೋದ್ ತಪ್ಪಿಸಿಕೊಂಡಿದ್ದನು. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಶಾಂತ್ ನನ್ನು ವಶಕ್ಕೆ ಪಡೆದು ಕ್ಷಿಪ್ರ ಕಾರ್ಯಚರಣೆಯಲ್ಲಿ ಇನ್ನೊಬ್ಬ ಆರೋಪಿಯನ್ನು ಬಂಧಿಸಿರುತ್ತಾರೆ. ಅಣ್ಣತಮ್ಮಂದಿರಾಗಿರುವ ಇವರು ಮದ್ಯವ್ಯಸನ ಮಾಡಿದ್ದರು ಎಂದು ತಿಳಿದುಬಂದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on