ಕೌಟುಂಬಿಕ ಕಾಯ್ದೆಯಡಿ ಜೀವನಾಂಶ ಹೆಚ್ಚಿಸಲು ಸಾಧ್ಯವಿಲ್ಲ : ಹೈಕೋರ್ಟ್

ಬೆಂಗಳೂರು: ಪತಿಯಿಂದ ಪರಿತ್ಯಕ್ತಗೊಂಡ ಮಹಿಳೆಗೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ – 2015ರ ಅಡಿ ನಿಗದಿಪಡಿಸಲಾದ ಜೀವನಾಂಶವನ್ನು ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಕಲಂ 127ರ ಅಡಿಯಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲʼ ಎಂದು ಹೈಕೋರ್ಟ್‌ ತಿಳಿಸಿದೆ.
ಈ ಬಗ್ಗೆ ಶಿವಾನಂದ ಎಂಬವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಾನ್ಯ ಮಾಡಿದೆ.
“ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜಿವನಾಂಶ ನಿಗದಿಪಡಿಸಿದರೆ ಅದೇ ಕಾಯ್ದೆಯಲ್ಲಿ ಅದರ ಹೆಚ್ಚಳಕ್ಕೆ ಅವಕಾಶವಿಲ್ಲ. ಸಿಆರ್‌ಪಿಸಿಸಿ ಜೀವನಾಂಶ ನಿಗದಿಯಾಗಿದ್ದರೆ ಮಾತ್ರ ಅದೇ ಕಾಯ್ದೆಯ ಬೇರೆ ಕಲಂನಲ್ಲಿ ಹೆಚ್ಚಳಕ್ಕೆ ಅವಕಾಶವಿದೆ. ಹೀಗಾಗಿ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೊರಡಿಸುವ ಆದೇಶ ಕಾನೂನು ಬಾಹಿರವಾಗಿದೆ” ಎಂದು ನ್ಯಾಯಪೀಠ ಹೇಳಿದೆ.

error: Content is protected !!
Scroll to Top