ಕಾರ್ಕಳ : ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ಕಾರ್ಯಾರಂಭ

ಕಾರ್ಕಳ : ಕಾರ್ಕಳ ನ್ಯಾಯಾಲಯ ಸಂಕೀರ್ಣದಲ್ಲಿ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಫೆ. 28ರಂದು ಉಡುಪಿ ಜಿಲ್ಲಾ ಎರಡನೇ ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕಾರ್ಕಳ ವ್ಯಾಪ್ತಿಯ ಕೆಲವೊಂದು ಕೇಸುಗಳು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಕಳ ನ್ಯಾಯಾಲಯದಲ್ಲೇ ಸತ್ರ ನ್ಯಾಯಾಲಯ ಕಾರ್ಯಾರಂಭವಾಗಿದೆ ಎಂದರು.
ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ರೂಪಶ್ರೀ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಚೇತನಾ, ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ, ಹಿರಿಯ ವಕೀಲರಾದ ಎಂ.ಕೆ. ವಿಜಯ ಕುಮಾರ್, ಬಾಲಕೃಷ್ಣ ಶೆಟ್ಟಿ, ಶೇಖರ ಮಡಿವಾಳ, ರವೀಂದ್ರ ಮೊಯ್ಲಿ, ಮುರಳೀಧರ ಭಟ್, ಮಣಿರಾಜ್ ಶೆಟ್ಟಿ, ರೇಖಾ ಹೆಗ್ಡೆ, ಡಿ.ವೈಎಸ್.ಪಿ. ವಿಜಯ ಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಸ್ವಾಗತಿಸಿ, ನಿರೂಪಿಸಿದರು. ಜತೆ ಕಾರ್ಯದರ್ಶಿ ಸವಿತಾ ಹೆಗ್ಡೆ ವಂದಿಸಿದರು.

error: Content is protected !!
Scroll to Top