Thursday, May 19, 2022
spot_img
Homeಸುದ್ದಿಕಾರ್ಕಳ ಉತ್ಸವದಿಂದ ಜೀವನೋತ್ಸಾಹ- ಸುನಿಲ್‌ ಕುಮಾರ್‌

ಕಾರ್ಕಳ ಉತ್ಸವದಿಂದ ಜೀವನೋತ್ಸಾಹ- ಸುನಿಲ್‌ ಕುಮಾರ್‌

ಕಾರ್ಕಳ : ಧಾರ್ಮಿಕ, ಸಾಂಸ್ಕೃತಿಕವಾಗಿ ಕಾರ್ಕಳ ಕ್ಷೇತ್ರ ಶ್ರೀಮಂತವಾಗಿದ್ದು, ಕೊರೊನ ಸಾಂಕ್ರಾಮಿಕ ಮರೆತು ಮರಳಿ ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ಕಾರ್ಕಳ ಉತ್ಸವ ನಡೆಯುತ್ತಿದೆ. ಪ್ರತಿಯೋರ್ವರು ಕಾರ್ಕಳ ಉತ್ಸವದಲ್ಲಿ ಸಂಭ್ರಮಿಸಬೇಕೆಂದು ಇಂಧನ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಇಲ್ಲಿನ ಸ್ವರಾಜ್ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ಕಾರ್ಕಳ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಮಾ. 10ರಿಂದ 17ರ ತನಕ ಗಾಂಧಿ ಮೈದಾನಲ್ಲಿ ಕಾರ್ಯಕ್ರಮ ನಡೆಯಲಿದ್ದು ಮಾ. 18, 19 ಹಾಗೂ 20ರಂದು ಸ್ವರಾಜ್ ಮೈದಾನಲ್ಲಿ ಕಾರ್ಯಕ್ರಮ ನಡೆಯಲಿವೆ. 10ರಿಂದ 14ರ ತನಕ ಹೆಲಿಕಾಪ್ಟರ್ ವಿಹಾರದಲ್ಲಿ ಜನರು ಭಾಗವಹಿಸಲು ಅವಕಾಶವಿದೆ. 15ರಂದು 150ಕ್ಕೂ ಅಧಿಕ ಗಾಳಿಪಟಗಳ ಉತ್ಸವ, 16ರಿಂದ 20ರ ತನಕ ಗೂಡು ದೀಪ ಪ್ರದರ್ಶನ ನಡೆಯಲಿದೆ. ಪೆರ್ವಾಜೆ ಶಾಲೆಯಲ್ಲಿ 14ರಿಂದ ಎಲ್ಲ ರಾಜ್ಯಗಳ ಸುಮಾರು 200 ವಸ್ತು ಪ್ರದರ್ಶನ ಮಳಿಗೆಗಳಿರಲಿವೆ. ಆಹಾರೋತ್ಸವ ನಡೆಯಲಿವೆ.  ಉತ್ಸವದ ಅತೀ ಮಹತ್ವವಾದ ಘಟ್ಟವೆಂದರೆ ಮಾ.18ರಂದು ನಡೆಯುವ ಉತ್ಸವ ಮೆರವಣಿಗೆ. ಇದರಲ್ಲಿ ದೇಶದ ಬೇರೆಬೇರೆ ಭಾಗಗಳಿಂದ ಕಲಾವಿದರು ಭಾಗವಹಿಸಲಿರುವರು.

ಸ್ವಚ್ಛತಾ ಕಾರ್ಯ
ಮಾ.6 ರಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ ವಿವಿಧ ತಂಡಗಳು ಉತ್ಸವ ಸ್ವಚ್ಚತಾ ಕಾರ್ಯ ನಡೆಯಲಿದೆ. ಉತ್ಸವ ಸಂದರ್ಭ ಅನಂತಶಯನದಿಂದ ಎಲ್ಲ ವಾಹನಗಳಿಗೂ ಸ್ವರಾಜ್ ಮೈದಾನದ ಕಡೆಗೆ ಸಂಚಾರ ನಿರ್ಬಂಧಿಸಿದೆ. ಆದುದರಿಂದ ಮೈಸೂರಿನಲ್ಲಿ ಕಾಣಸಿಗುವ ಕುದುರೆ ಟಾಂಗಾಗಳನ್ನು ಕರೆಸಿ ಅ ಮೂಲಕ ಸ್ವರಾಜ್ ಮೈದಾನದ ತನಕ ಜನರನ್ನು ಕರೆ ತರುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪ್ರತಿವರ್ಷ ಸಂಭ್ರಮಿಸಲಿ
ನಿಟ್ಟೆ ವಿದ್ಯಾಸಂಸ್ಥೆ ಅಧ್ಯಕ್ಷ ಎನ್. ವಿನಯ್ ಹೆಗ್ಡೆ ಮಾತನಾಡಿ, ಕಾರ್ಕಳ ಉತ್ಸವ ಈ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರದೇ ಪ್ರತೀ ವರ್ಷವೂ ಇಂತಹ ಹಬ್ಬಗಳು ನಡೆಯಬೇಕು. ಪ್ರತಿದಿನ ಜನರು ಈ ಉತ್ಸವದಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದರು.

 ಜಿಲ್ಲಾ ಸಂಸ್ಕೃತಿ ಇಲಾಖೆಯ ಪೂರ್ಣಿಮಾ,  ಸಂಸ್ಕೃತಿ ಇಲಾಖೆಯ ಜಂಟಿ ನಿದೇರ್ಶಕ ಮಲ್ಲಿಕಾರ್ಜುನ ಸ್ವಾಮಿ, ಉಪವಿಭಾಗಾಧಿಕಾರಿ ರಾಜು, ಉದ್ಯಮಿ ಸಂತೋಷ್ ಡಿ.ಸಿಲ್ವಾ, ಸುಬ್ರಾಯ ಪೈ, ಶಿಲ್ಪಿ ಸತೀಶ್ ಆಚಾರ್ಯ, ಬಾಲಾಜಿ ಮಂದಿರದ  ಬಾಲಕೃಷ್ಣ ಹೆಗ್ಡೆ, ತಹಶೀಲ್ದಾರ್ ಪುರಂದರ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾಧಿಕಾರಿ ಕೂರ್ಮಾ ರಾವ್, ಸಾಹಿತಿ ಅಂಬಾತನಯ ಮುದ್ರಾಡಿ ಶುಭಹಾರೈಸಿದರು.
ಯೋಗೀಶ್ ಕಿಣಿ ಕಾರ್ಕಳ ಗೀತೆಯನ್ನು ಹಾಡಿದರು. ಕಸಾಪ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ರಾಜೇಂದ್ರ ಭಟ್ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!