ಪ್ರೊ ಕಬಡ್ಡಿ: ಚಾಂಪಿಯನ್ ಪಟ್ಟ ಅಲಂಕರಿಸಿದ ದಬಾಂಗ್ ಡೆಲ್ಲಿ

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಪ್ರೊ ಕಬಡ್ಡಿ ಸೀಸನ್ 8 ರ ಚಾಂಪಿಯನ್ ಆಗಿ ದಬಾಂಗ್ ಡೆಲ್ಲಿ ಕೆಸಿ ತಂಡ ಹೊರಹೊಮ್ಮಿದ್ದು ತನ್ನ ಚೊಚ್ಚಲ ಕಪ್ ಗೆದ್ದುಕೊಂಡಿದೆ.
ಫೈನಲ್ ಪಂದ್ಯದಲ್ಲಿ ಎದುರಾಳಿಗಳಾಗಿದ್ದ ಪಾಟ್ನಾ ಪೈರಟ್ಸ್ ಮತ್ತು ದಬಾಂಗ್ ಡೆಲ್ಲಿ ಕೆ.ಸಿ ತಂಡಗಳ ರೋಚಕ ಪಂದ್ಯದಲ್ಲಿ ಕೇವಲ 1 ಅಂಕದ ಅಂತರದಲ್ಲಿ ಪಾಟ್ನಾ ಪೈರಟ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ಡೆಲ್ಲಿ ಟೀಂ ಸೀಸನ್ 8ರ ಗೆಲುವನ್ನು ಕಂಡಿತು. ಕಳೆದ ಬಾರಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಫೈನಲ್ ನಲ್ಲಿ ಸೋತು ರನ್ನರ್ ಅಪ್ ಆಗಿದ್ದ ದಬಾಂಗ್ ಡೆಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಈ ಮೂಲಕ 2 ತಿಂಗಳಿಗೂ ಹೆಚ್ಚು ಕಾಲ 137 ಪಂದ್ಯಗಳಲ್ಲಿ ಸೆಣಸಾಡಿದ 12 ತಂಡಗಳ ನಡುವಿನ ಕಾದಾಟಕ್ಕೆ ತೆರೆಬಿದ್ದಿದೆ.
ದಬಾಂಗ್ ಡೆಲ್ಲಿ ಕೆ ಸಿ ತಂಡದ ರೇಡರ್ ನವೀನ್ ಕುಮಾರ್ ಮತ್ತು ವಿಜಯ್ ಉತ್ತಮ ಪ್ರದರ್ಶನ ನೀಡಿದ್ದು, ಆರಂಭದಿಂದ್ಲೂ ಗೆಲುವಿಗಾಗಿ ಎರಡೂ ತಂಡಗಳು ಪ್ರಬಲವಾಗಿ ಕಾದಾಡಿ ಹಿಡಿತ ಸಾಧಿಸಿತ್ತು. ಕಡಿಮೆ ಅಂಕಗಳ ಅಂತರದಿಂದ ಪಾಟ್ನಾ ಪೈರಟ್ಸ್ ಪಂದ್ಯ ಆರಂಭವಾದಾಗಿನಿಂದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಕೊನೆಯ 6 ನಿಮಿಷಗಳ ಆಟವಿರುವಾಗ ದಬಾಂಗ್ ಡೆಲ್ಲಿ ಮುನ್ನಡೆ ಸಾಧಿಸಿ 37-36 ಅಂಕಗಳಿಂದ 3 ಬಾರಿ ಚಾಂಪಿಯನ್ ಆಗಿದ್ದ ಪಟ್ನಾ ಪೈರಟ್ಸ್ ತಂಡವನ್ನು ರನ್ನರ್ ಅಪ್ ಸ್ಥಾನಕ್ಕೆ ಇಳಿಸಿ ಸೀಸನ್ 8ರ ಗೆಲುವಿನ ಪಟ್ಟಕ್ಕೇರಿತು.

error: Content is protected !!
Scroll to Top