ಕಾರ್ಕಳ : ಕಾರ್ಕಳ ಉತ್ಸವ ಕುರಿತು ಫೆ. 27ರ ರವಿವಾರ 9.30ರಿಂದ ಸ್ವರಾಜ್ಯ ಮೈದಾನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಭಾಷೆ, ಸಂಸ್ಕೃತಿ, ಕಲೆಯ ಸಂಭ್ರಮ ಕಾರ್ಕಳ ಉತ್ಸವ ಮಾ. 10ರಿಂದ 20ರವರೆಗೆ ಅದ್ಧೂರಿಯಾಗಿ ನೆರವೇರಲಿದೆ. ಜಾತಿ, ಧರ್ಮ, ಪಕ್ಷ ರಹಿತವಾಗಿ ಅತ್ಯಂತ ಅಭೂತಪೂರ್ವವಾಗಿ ಉತ್ಸವ ಸಂಘಟಿತವಾಗುತ್ತಿದ್ದು, ಈ ನಿಟ್ಟಿನಲ್ಲಿ ಈಗಾಗಲೇ 37 ಸಮಿತಿಗಳನ್ನು ರಚಿಸಲಾಗಿದೆ.
ಕಾರ್ಕಳ ಉತ್ಸವ ರೂವಾರಿ ಸಚಿವ ವಿ. ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ವಿವಿಧ ಸಮಿತಿ ಸದಸ್ಯರು, ದೇವಸ್ಥಾನ ಆಡಳಿತ ಮೊಕ್ತೇಸರರು, ಉದ್ಯಮಿಗಳು, ಸಂಘ – ಸಂಸ್ಥೆಗಳ ಪ್ರಮುಖರು, ಮಹಿಳಾ ಮಂಡಳಿಗಳು, ಸ್ವ-ಸಹಾಯ ಸಂಘಗಳ ಪ್ರಮುಖರು, ವಿದ್ಯಾರ್ಥಿಗಳು, ಎನ್. ಎಸ್. ಎಸ್. ಮತ್ತು ಎನ್.ಸಿ.ಸಿ. ಘಟಕದ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.
ಫೆ. 27 : ಕಾರ್ಕಳ ಉತ್ಸವ ಪೂರ್ವಭಾವಿ ಸಭೆ
Recent Comments
ಕಗ್ಗದ ಸಂದೇಶ
on