ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವರು ಸ್ವದೇಶಕ್ಕೆ ವಾಪಸ್ಸಾಗಿದ್ದು, ಹಲವರು ಅಲ್ಲೇ ಸಿಲುಕಿದ್ದಾರೆ. ಉಕ್ರೇನ್ನಲ್ಲಿ ಈಗಾಗಲೇ ವಿಮಾನ ಹಾರಾಟ ಸ್ತಬ್ಧಗೊಂಡಿದೆ. ಹಾಗಾದ್ರೆ ಯುದ್ಧ ಭೀತಿಯಲ್ಲಿ ಕಂಗೆಟ್ಟಿರುವ ಅವರು ದೇಶಕ್ಕೆ ವಾಪಸ್ಸಾಗೋದು ಹೇಗೆ? ರಷ್ಯಾ, ಉಕ್ರೇನ್ ನಡುವಿನ ಯುದ್ಧ ಜೋರಾಗುತ್ತಿದೆ. ನಿನ್ನೆ ಇಡೀ ದಿನ ಉಕ್ರೇನ್ ಮೇಲೆ ದಾಳಿ ನಡೆಸಿದ್ದ ರಷ್ಯಾ ಸೇನೆ, 137ಕ್ಕೂ ಹೆಚ್ಚು ಮಂದಿ ಉಕ್ರೇನ್ ಸೈನಿಕರು ಹಾಗೂ ನಾಗರಿಕರನ್ನು ಕೊಂದಿತ್ತು. ಇದೀಗ ಇಂದೂ ಕೂಡ ಯುದ್ಧ ಮುಂದುವರೆದಿದೆ. ಅತ್ತ ಉಕ್ರೇನ್ನಲ್ಲಿ ಯುದ್ಧ ಶುರುವಾಗುತ್ತಿದ್ದಂತೆ ಇತ್ತ ಭಾರತೀಯರೂ ಸಹ ಭಯಕ್ಕೆ ಒಳಗಾಗಿದ್ದಾರೆ. ಯಾಕೆಂದ್ರೆ ಅಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದಾರೆ. ಅವರಲ್ಲಿ ಕೆಲವರು ಉದ್ಯೋಗಿಗಳಾಗಿದ್ದರೆ, ಬಹುತೇಕ ಹೆಚ್ಚಿನವರು ವಿದ್ಯಾರ್ಥಿಗಳು. ಅದರಲ್ಲೂ ಇಂಜಿನಿಯರ್ ಸೇರಿದಂತೆ ಹಲವು ಕೋರ್ಸ್ ಓದುತ್ತಿದ್ದು, ಈ ಪೈಕಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೇ ಜಾಸ್ತಿ. ಇದೀಗ ಹೆಚ್ಚಿನ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಕ್ಷಣ ಕ್ಷಣಕ್ಕೂ ಯುದ್ಧ ಭೀತಿ ಜಾಸ್ತಿಯಾಗುತ್ತಾ ಇರುವುದರಿಂದ ವಿದ್ಯಾರ್ಥಿಗಳ ಜೊತೆಗೆ ಇಲ್ಲಿ ಪೋಷಕರೂ ಆತಕಂಗೊಂಡಿದ್ದಾರೆ.
ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿ ಎಲ್ಲಾ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಯುದ್ಧದ ಸೂಚನೆ ಸಿಗುತ್ತಿದ್ದಂತೆ ಏರ್ಪೋರ್ಟ್ ಬಂದ್ ಮಾಡಿರುವ ಉಕ್ರೇನ್ ಸರ್ಕಾರ, ಅಲ್ಲೆಲ್ಲಾ ಸೇನಾಪಡೆಗಳನ್ನು ನಿಯೋಜಿಸಿದೆ.
ಭಾರತೀಯರನ್ನು ಕರೆತರಲು ಹೋಗಿದ್ದ ವಿಮಾನ ವಾಪಸ್
ಉಕ್ರೇನ್ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಮುಂದಾಗಿದೆ. ಈಗಾಗಲೇ ಹಲವರನ್ನು ಏರ್ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದೆ. ಆದ್ರೆ ಉಕ್ರೇನ್ ಏರ್ಪೋರ್ಟ್ ಮುಚ್ಚಿದ್ದರಿಂದ ಭಾರತದಿಂದ ಹೋಗಿದ್ದ ವಿಮಾನ ಫೆ.24 ರಂದು ದೆಹಲಿಗೆ ವಾಪಸ್ ಆಗಿತ್ತು. ಹೀಗಾಗಿ ಅದೆಷ್ಟೋ ಭಾರತೀಯರು ವಾಪಸ್ ಬರಲಾಗದೇ ಉಕ್ರೇನ್ನಲ್ಲೇ ಪರದಾಡುತ್ತಿದ್ದಾರೆ.
ಪರದೇಶದಲ್ಲಿ ಪರದಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು
Recent Comments
ಕಗ್ಗದ ಸಂದೇಶ
on