ಉಡುಪಿ : ಜಿಲ್ಲೆಯಲ್ಲಿ ಫೆ. 27ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ. 73,995 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ ಎಂದರು. ಭಾನುವಾರ ಬೆಳಗ್ಗೆ ಉಡುಪಿಯ ಸರ್ಕಾರಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕಾಯಕ್ರಮದ ಉದ್ಘಾಟನೆ ನಡೆಯಲಿದೆ.
ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 61,105 ಹಾಗೂ ನಗರ ಪ್ರದೇಶದ 12,890 ಐದು ವರ್ಷದ ಒಳಗಿನ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಒಟ್ಟು 662 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು, ಜೊತೆಗೆ 6 ಮೊಬೈಲ್ ಟೀಮ್, ಬಸ್, ರೈಲು ನಿಲ್ದಾಣ ಸೇರಿದಂತೆ ಜನ ನಿಬಿಡ ಪ್ರದೇಶದಲ್ಲಿ 36 ಟ್ರಾನ್ಸಿಟ್ ಬೂತ್, ಟೋಲ್ ಗೇಟ್ಗಳಲ್ಲಿ ಲಸಿಕಾ ಕೇಂದ್ರ ತೆರೆಯಲಿದ್ದೇವೆ. ಫೆ.28ರಿಂದ ಮಾ.2ರ ವರೆಗೆ ಸ್ವಯಂ ಸೇವಕರು ಜಿಲ್ಲೆಯ ವಿವಿಧ ಭಾಗದ ಮನೆಗಳಿಗೆ ಭೇಟಿ ನೀಡಿ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸಿರುವ ಬಗ್ಗೆ ಖಚಿತಪಡಿಸಲಿದ್ದಾರೆ ಎಂದರು.
ಫೆ.27 : ಉಡುಪಿ ಜಿಲ್ಲೆಯಲ್ಲಿ ಪೋಲಿಯೋ ಲಸಿಕಾಕರಣ
Recent Comments
ಕಗ್ಗದ ಸಂದೇಶ
on