Tuesday, July 5, 2022
spot_img
Homeಸುದ್ದಿಕಾಮನ್ ವೆಲ್ತ್ ಗೇಮ್ಸ್ ಗೆ ಅರ್ಹತೆ ಪಡೆದ ವೇಟ್ ಲಿಫ್ಟರ್ ಮೀರಾಬಾಯಿ ಚಾನು

ಕಾಮನ್ ವೆಲ್ತ್ ಗೇಮ್ಸ್ ಗೆ ಅರ್ಹತೆ ಪಡೆದ ವೇಟ್ ಲಿಫ್ಟರ್ ಮೀರಾಬಾಯಿ ಚಾನು

ಸಿಂಗಾಪುರ: ಸಿಂಗಾಪುರ ವೇಟ್ ಲಿಫ್ಟಿಂಗ್ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಭಾರತದ ಸ್ಟಾರ್ ವೇಟ್ ಲಿಫ್ಟರ್ ಆಟಗಾರ್ತಿ ಮೀರಾಬಾಯಿ ಚಾನು 2022 ಕಾಮನ್ ವೆಲ್ತ್ ಗೇಮ್ಸ್ ಗೆ ಅರ್ಹತೆ ಪಡೆದಿದ್ದಾರೆ.
ಬರ್ನಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ 2022 ಕಾಮನ್ ವೆಲ್ತ್ ಗೇಮ್ಸ್ ನ ಅರ್ಹತಾ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ 55 ಕೆಜಿ ವೇಟ್ ವಿಭಾಗದಲ್ಲಿ ಸ್ಪರ್ಧಿಸಿದ ಚಾನು 191 (86+150 ಕೆಜಿ) ಕೆಜಿ ಭಾರ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಜೆಸ್ಸಿಕಾ ಸೆವಾಸ್ಟೆಂಕೊ 167 ಕೆಜಿ ( 77+90 ಕೆಜಿ) ಭಾರ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದಿದ್ದು ಚಾನು ಅವರಿಗಿಂತ 24 ಕೆಜಿ ಕಡಿಮೆ ಭಾರ ಎತ್ತಿದರು. ಮಲೇಷ್ಯಾದ ಎಲ್ಲೀ ಕಸ್ಸಂದ್ರ ಎಂಗಲ್ಬರ್ಟ್ 165 (75+90 ಕೆಜಿ ) ಭಾರ ಎತ್ತುವುದರೊಂದಿಗೆ ಮೂರನೇ ಸ್ಥಾನ ಪಡೆದರು.
ಟೋಕಿಯೋ ಒಲಂಪಿಕ್ಸ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬೆಳ್ಳಿ ಪದಕವನ್ನು ಮೀರಾಬಾಯಿ ಚಾನು ತಂದುಕೊಟ್ಟಿದ್ದರು. 2021 ರಲ್ಲಿ ನಡೆದ ಐತಿಹಾಸಿಕ ಟೋಕಿಯೋ ಗೇಮ್ಸ್ ನಂತರ ಚಾನುಗೆ ಇದು ಮೊದಲ ಸ್ಪರ್ಧಾತ್ಮಕ ಪಂದ್ಯವಾಗಿತ್ತು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!