ಕಾರ್ಕಳ : ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಫೆ. 26ರಂದು ಸಂಸ್ಥಾಪಕರ ದಿನಾಚರಣೆ ನಡೆಯಲಿದೆ. ಸಂಜೆ 5:30ರಿಂದ ನಡೆಯುವ ಕಾರ್ಯಕ್ರಮವನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಉಡುಪಿ ಶಾಸಕ ರಘಪತಿ ಭಟ್, ಎನ್ಐಟಿ ಗೋವಾದ ನಿರ್ದೇಶಕ ಡಾ. ಗೋಪಾಲ್ ಮೊಗೆರಾಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರೋತ್ಸಾಹಧನ
ಈ ವೇಳೆ ಎನ್ಇಇಟಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 640 ನೇ ರ್ಯಾಂಕ್ ಗಳಿಸಿದ ಸುಕ್ಷಿತ್ ಹಾಗೂ ಜೆಇಇ ಅಡ್ವಾನ್ಸ್ನಲ್ಲಿ ರಾಷ್ಟ್ರ ಮಟ್ಟದಲ್ಲಿ 1099 ನೇ ರ್ಯಾಂಕ್ ಗಳಿಸಿದ ಅಭಯ್ ಕಾಮತ್ ಗೆ ತಲಾ 2 ಲಕ್ಷ ರೂ.ವಿನಂತೆ ಜೆಇಇ, ಎನ್ಇಇಟಿ ಹಾಗೂ ಕೆಸಿಇಟಿಯ ಸಾಧಕರಿಗೆ ಒಟ್ಟು 13 ಲಕ್ಷದ 90 ಸಾವಿರ ರೂ. ಪ್ರೋತ್ಸಾಹ ಧನ ವಿತರಣೆಯಾಗಲಿದೆ. ಅಜೆಕಾರ್ ಪದ್ಮಗೋಪಾಲ್ ಟ್ರ ಸ್ಟ್ ವತಿಯಿಂದ ಪ್ರೋತ್ಸಾಹಧನ ನೀಡಲಾಗುವುದು. ಎನ್ಇಇಟಿ ಪ್ರಥಮ ಹಂತದ ಆಯ್ಕೆಯ ಮೂಲಕ ಎಂಬಿಬಿಎಸ್ ಸೇರಲಿರುವ 73 ವಿದ್ಯಾರ್ಥಿಗಳ ಪರವಾಗಿ ಪ್ರತಿ ವಿದ್ಯಾರ್ಥಿಗೆ ರೂ. 2000 ದಂತೆ, ಒಟ್ಟು ರೂ. 1,46,000 ವನ್ನು ಭಾರತೀಯ ಸೇನೆಗೆ ನೀಡಲಾಗುವುದು ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.