Wednesday, July 6, 2022
spot_img
Homeಸುದ್ದಿಹಿಜಾಬ್‌ ವಿಚಾರಣೆ ಪೂರ್ಣ- ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಹಿಜಾಬ್‌ ವಿಚಾರಣೆ ಪೂರ್ಣ- ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರು: ಹಿಜಾಬ್‌ ವಿವಾದದ ಸಂಬಂಧ ನ್ಯಾಯಾಲಯ ವಿಚಾರಣೆಯನ್ನು ಫೆ.25ರಂದು ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.
ಹನ್ನೊಂದು ದಿನಗಳಿಂದ ಹಿಜಾಬ್‌ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರ ನ್ಯಾಯಪೀಠದಲ್ಲಿ ನಡೆಸಲಾಗಿತ್ತು.
ಈ ನಡುವೆ ನ್ಯಾಯಾಲಯ ವಿಚಾರಣೆ ಮುಗಿಯುವವರೆಗೆ ಸಮವಸ್ತ್ರ ಇರುವ ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವಂತಿಲ್ಲ ಎಂದು ಮಧ್ಯಂತರ ಆದೇಶವನ್ನು ಹೊರಡಿಸಿತ್ತು. ಇದೀಗ ನಡೆದ ವಿಚಾರಣೆಯನ್ನು ಪರಿಶೀಲಿಸಿ ಶೀಘ್ರದಲ್ಲಿ ಆದೇಶ ನೀಡುವ ಸಾಧ್ಯತೆಯಿದೆ.

ಸರ್ಕಾರಿ ಆದೇಶವನ್ನು ಉಡುಪಿಯ ಸರ್ಕಾರಿ ಪದವಿಪೂರ್ವ ವಿದ್ಯಾರ್ಥಿನಿಯರ ಕಾಲೇಜು ಹಾಗೂ ಮತ್ತಿತರರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಪರ್ದಾ ಅಥವಾ ಬುರ್ಖಾ ಕಡ್ದಾಯ ಧಾರ್ಮಿಕ ಆಚರಣೆಯಾಗದೇ ಇರಬಹುದು ಆದರೆ ಹಿಜಾಬ್ ಅಥವಾ ಹೆಡ್ ಸ್ಕಾರ್ಫ್ ಇಸ್ಲಾಮ್ ನ ಕಡ್ಡಾಯ ಭಾಗವಾಗಿದೆ.  ಕೇರಳ ಹಾಗೂ ಮದ್ರಾಸ್ ಹೈಕೋರ್ಟ್ ಗಳು ಇಸ್ಲಾಮಿಕ್ ಗ್ರಂಥಗಳನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬಂದಿವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. 

ಪ್ರತಿವಾದ ಮಂಡಿಸಿರುವ ಸರ್ಕಾರಿ ಪರ ವಕೀಲರು, ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದು, ಹಿಜಾಬ್ ಕೂಡ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಹೇಳಿದ್ದು ಸುಪ್ರೀಂ ಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ. ಶಿರೂರು ಮಠದ ಪ್ರಕರಣದಿಂದ ಮೊದಲುಗೊಂಡು ಶಬರಿಮಲೆ ಪ್ರಕರಣಗಳವರೆಗೆ ತಮ್ಮ ವಾದಗಳ ಸಮರ್ಥನೆಗೆ  ಉಲ್ಲೇಖಗಳನ್ನು ನೀಡುತ್ತಾ, ಹಿಜಾಬ್ ಸಂವಿಧಾನದ ಆರ್ಟಿಕಲ್ 25 ರ ಅಡಿಯಲ್ಲಿ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ ನಾವಡಗಿ ಹೇಳಿದ್ದಾರೆ. ---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!