ಮಾಳ : ಚಲಿಸುತ್ತಿದ್ದ ಬೈಕಿಗೆ ಟಿಪ್ಪರ್ ಡಿಕ್ಕಿಯಾಗಿ ಸವಾರನಿಗೆ ಗಾಯವಾದ ಘಟನೆ ಫೆ. 21ರಂದು ಮಾಳ ಘಾಟ್ ನ ಅಬ್ಬಾಸ್ ಕಟ್ಟಿಂಗ್ ಕ್ರಾಸ್ ಬಳಿ ಸಂಭವಿಸಿದೆ. ರಂಜಿತ್ ಕುಮಾರ್ ಮತ್ತು ಅವರ ಗೆಳೆಯ ಶ್ರೀನಿಧಿ ಗುಜರಾನ್ ಬುಲೆಟ್ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭ ಕಾರ್ಕಳ- ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಳದಿಂದ ಶೃಂಗೇರಿಯ ಕಡೆಗೆ ಅಶೋಕ ನಾಯಕ್ ಎಂಬವರು ಚಲಿಸುತ್ತಿದ್ದ ಟಿಪ್ಪರ್ ತೀರಾ ಬಲಬದಿಗೆ ಬಂದು ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸಮೇತ ಸವಾರರು ನೆಲಕ್ಕೆ ಉರುಳಿದ್ದು, ಸವಾರರು ಗಾಯಗೊಂಡಿರುತ್ತಾರೆ. ಶ್ರೀನಿಧಿ ಗುಜರಾನ್ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಜಿತ್ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ. ಈ ಕುರಿತು ಫೆ. 24ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on