Thursday, May 19, 2022
spot_img
Homeಅಂಕಣಆರೋಪಿತ ವ್ಯಕ್ತಿಗಳ ದಸ್ತಗಿರಿ - ಕಾನೂನು ಮಾಹಿತಿ

ಆರೋಪಿತ ವ್ಯಕ್ತಿಗಳ ದಸ್ತಗಿರಿ – ಕಾನೂನು ಮಾಹಿತಿ

ಯಾವುದೇ ವ್ಯಕ್ತಿ ಜಾಮೀನು ರಹಿತ (non bailable) ಅಪರಾಧ ಮಾಡಿದ ಸಂದರ್ಭದಲ್ಲಿ ಆತನ ವಿಚಾರಣೆಯ ಸಮಯ ಆತನು ಕೊಟ್ಟ ಹೆಸರು, ವಾಸಸ್ಥಳ ಮತ್ತು ಇತರ ವಿವರ ಪೊಲೀಸ್‌ ಅಧಿಕಾರಿಗಳಿಗೆ ಅನುಮಾನಾಸ್ಪದವಾಗಿ ಕಂಡು ಬಂದರೆ ಆತನ ಬಗ್ಗೆ ಮುಂದಿನ ವಿಚಾರಣೆಗಾಗಿ ದಸ್ತಗಿರಿ ಮಾಡಬಹುದಾಗಿದೆ. ಅಂಥ ವ್ಯಕ್ತಿಯ ನಿಜವಾದ, ಸರಿಯಾದ ಹೆಸರು ಮತ್ತು ವಿಳಾಸವನ್ನು ತಿಳಿದುಕೊಂಡ ಅನಂತರ ಪೊಲೀಸ್ ಅಧಿಕಾರಿಯು ಆತನಿಂದ ಮುಂದಕ್ಕೆ ಅವಶ್ಯ ಬಿದ್ದಾಗ ಸಂಬಂಧಪಟ್ಟ ನ್ಯಾಯಾಧೀಶರ ಮುಂದೆ ಹಾಜರಾಗುವಂತೆ ತಿಳಿಸಿ ಆತನಿಂದ ಸೂಕ್ತ ಮುಚ್ಚಳಿಕೆ ಪಡೆದು ಬಿಡುಗಡೆ ಮಾಡಬಹುದು. ಒಂದು ವೇಳೆ ದಸ್ತಗಿರಿಯಾದ ವ್ಯಕ್ತಿಯು ಭಾರತದ ನಿವಾಸಿ ಅಥವಾ ಪ್ರಜೆಯಾಗಿರದಿದ್ದರೆ ಆತನ ಬಿಡುಗಡೆ ಬಗ್ಗೆ ಆತನಿಗೆ ಪರಿಚಯವಿರುವ ಭಾರತ ದೇಶದ ಯಾವುದೇ ನಿವಾಸಿಯಿಂದ ಸೂಕ್ತ ಜಾಮೀನು ಮುಚ್ಚಳಿಕೆಯನ್ನು ಪಡೆದು ಬಂಧಿತ ವ್ಯಕ್ತಿಯನ್ನು ಬಿಡುಗಡೆ ಮಾಡಬಹುದು. ಬಂಧಿಸಲ್ಪಟ್ಟ ವ್ಯಕ್ತಿಯ ತನಿಖೆ ಸಮಯ ಆತನ ಸರಿಯಾದ‌, ನಿಜವಾದ ಹೆಸರು ಮತ್ತು ವಾಸಸ್ಥಳ ತಿಳಿಯಲು ಅಸಾಧ್ಯವಾದಲ್ಲಿ ಪೊಲೀಸ್‌ ಅಧಿಕಾರಿಯು ಅಂತಹ ವ್ಯಕ್ತಿಯನ್ನು ದಸ್ತಗಿರಿಯಾದ 24 ಘಂಟೆಯೊಳಗಾಗಿ ಸಮೀಪದ ವಿಚಾರಣಾಧಿಕಾರವುಳ್ಳ ನ್ಯಾಯಾಧೀಶರ ಸಮಕ್ಷಮ ಕಡ್ಡಾಯವಾಗಿ ಹಾಜರು ಪಡಿಸಬೇಕಾಗುತ್ತದೆ. ತನ್ನ ಸಮಕ್ಷಮ ಯಾವುದೇ ಅಪರಾಧಿತ ವ್ಯಕ್ತಿ ಜಾಮೀನು ರಹಿತ ಅಪರಾಧ ಕೃತ್ಯ ನಡೆಸಿದ ಸಂದರ್ಭದಲ್ಲಿ ಅಥವಾ ವ್ಯಕ್ತಿಯು ಯಾವುದೇ ಘೋಷಿತ ಅಪರಾಧ ಮಾಡಿದಲ್ಲಿ ಯಾವುದೇ ಖಾಸಗಿ ವ್ಯಕ್ತಿ ಸಹಾ ಅಪರಾಧಿತ ವ್ಯಕ್ತಿಯನ್ನು ದಸ್ತಗಿರಿ ಮಾಡಬಹುದು ಅಥವಾ ಮಾಡಿಸಬಹುದು. ಆದರೆ ದಸ್ತಗಿರಿಯಾದ ವ್ಯಕ್ತಿಯನ್ನು ದಸ್ತಗಿರಿ ಮಾಡಿದ ಖಾಸಗಿ ವ್ಯಕ್ತಿಯು ಅನಾವಶ್ಯಕವಾಗಿ ವಿಳಂಬ ಮಾಡದೇ ಪೊಲೀಸ್‌ ಅಧಿಕಾರಿಯ ವಶಕ್ಕೆ ನೀಡಬೇಕು. ದಂಡಪ್ರಕ್ರಿಯಾ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್) ನ ಕಲಂ 44 (1) ರ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ನ್ಯಾಯಿಕ ಅಥವಾ ಕಾರ್ಯಾಂಗ ದಂಡಾಧಿಕಾರಿಯ (ನ್ಯಾಯಾಧೀಶರ) ಸಮಕ್ಷಮ ಅಪರಾಧ ಮಾಡಿದರೆ ಅವನನ್ನು ನೇರವಾಗಿ ಬಂಧಿಸುವ ಅಧಿಕಾರ ನ್ಯಾಯಿಕ ಅಥವಾ ಕಾರ್ಯಾಂಗ ದಂಡಾಧಿಕಾರಿಯವರು ಹೊಂದಿರುತ್ತಾರೆ.

ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 9611682681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!