Thursday, May 26, 2022
spot_img
Homeಸುದ್ದಿಶಾಂತಿ ಸ್ಥಾಪನೆಗೆ ಇಡೀ ವಿಶ್ವವೇ ರಷ್ಯಾದ ಮೇಲೆ ಒತ್ತಡ ಹೇರಲಿ - ಉಕ್ರೇನ್‌ ಅಧ್ಯಕ್ಷ ಮನವಿ

ಶಾಂತಿ ಸ್ಥಾಪನೆಗೆ ಇಡೀ ವಿಶ್ವವೇ ರಷ್ಯಾದ ಮೇಲೆ ಒತ್ತಡ ಹೇರಲಿ – ಉಕ್ರೇನ್‌ ಅಧ್ಯಕ್ಷ ಮನವಿ

ಕೀವ್ : ಶಾಂತಿ ಸ್ಥಾಪನೆಗೆ ಇಡೀ ವಿಶ್ವವೇ ರಷ್ಯಾದ ಮೇಲೆ ಒತ್ತಡ ಹೇರುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಮನವಿ ಮಾಡಿಕೊಂಡಿದ್ದಾರೆ. ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿರುವ ರಷ್ಯಾದ ನಿರ್ಧಾರವನ್ನು ಖಂಡಿಸಿರುವ ಅವರು ಈ ವಿಚಾರವಾಗಿ ಟ್ವಿಟ್ ಮಾಡಿರುತ್ತಾರೆ.
ಯುಎಸ್, ಬ್ರಿಟನ್, ಜರ್ಮನಿ ಮತ್ತು ಪೋಲೆಂಡ್ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ನಾವು ಪುಟಿನ್ ವಿರೋಧಿ ಒಕ್ಕೂಟವನ್ನು ನಿರ್ಮಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಸಂಘರ್ಷ ನಿಲ್ಲಿಸುವಂತೆ ವಿಶ್ವಸಂಸ್ಥೆ
ಭದ್ರತಾ ಮಂಡಳಿಯ ತುರ್ತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಂಟೆರಸ್‌ ರಷ್ಯಾ ಅಧ್ಯಕ್ಷ ಪುಟಿನ್‌ ಅವರೇ ಮಾನವೀಯತೆ ದೃಷ್ಟಿಯಿಂದ ನಿಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಿ. ಶತಮಾನದ ಆರಂಭದಿಂದಲೂ ನಡೆಯದ ಅತ್ಯಂತ ಕೆಟ್ಟ ಯುದ್ಧ ಯುರೋಪಿನಲ್ಲಿ ಪ್ರಾರಂಭಿಸಲು ಅನುವು ಮಾಡಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!