ಮಾಸ್ಕೋ : ಯುದ್ಧ ಭೀತಿಯಿಂದ ಉಕ್ರೇನ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡುತ್ತಿದ್ದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದಾರೆ. ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಅವರು ಉಕ್ರೇನ್ ನ ಮಿಲಿಟರಿಗೆ ಕರೆ ನೀಡಿದ್ದು, ಉಭಯ ದೇಶಗಳ ನಡುವಣ ಬಿಕ್ಕಟ್ಟಿನಲ್ಲಿ ಮಧ್ಯೆ ಪ್ರವೇಶಿಸಿದವರ ವಿರುದ್ಧ ಪ್ರತೀಕಾರ ಕೈಗೊಳ್ಳುವುದಾಗಿ ಪುಟಿನ್ ಎಚ್ಚರಿಕೆ ರವಾನಿಸಲಿದ್ದಾರೆ.
ರಷ್ಯಾ, ನಮ್ಮ ಜನತೆಗೆ ಬೆದರಿಕೆ ಉಂಟುಮಾಡಲು ಪ್ರಯತ್ನಿಸಿದರೆ ಮತ್ತು ಮಧ್ಯಪ್ರವೇಶಿಸಲು ಪ್ರಯತ್ನಿಸುವ ಯಾರಿಗಾದರೂ ರಷ್ಯಾದಿಂದ ಪ್ರತಿಕ್ರಿಯೆ ತಕ್ಷಣವೇ ನೀಡಲಾಗುವುದು. ಇತಿಹಾಸದಲ್ಲಿ ಹಿಂದೆಂದೂ ಅನುಭವಿಸದಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಸಿದ್ದಾರೆ.
ಉಕ್ರೇನ್ ಮಿಲಿಟರಿ ಶಕ್ತಿಯನ್ನು ಮಟ್ಟಹಾಕುವುದು, ಅಲ್ಲಿನ ನಾಜಿ ತತ್ವವನ್ನು ತೊಡೆದು ಹಾಕಿಸುವುದು, ನಮ್ಮ ದೇಶದ ಜನರ ರಕ್ಷಣೆ ನಮ್ಮ ಗುರಿಯಾಗಿದೆ, ಉಕ್ರೇನ್ ಕಡೆಯಿಂದ ಬೆದರಿಕೆಯಿರುವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇದು ಪ್ರತೀಕಾರದ ಕ್ರಮವಾಗಿದೆ. ಉಕ್ರೇನ್ನ ಪ್ರದೇಶಗಳನ್ನು, ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳುವುದು ನಮ್ಮ ಯೋಜನೆಯಲ್ಲ ಎಂದವರು ತಿಳಿಸಿದ್ದಾರೆ. ಉಕ್ರೇನ್ ದೇಶದೊಳಗೆ ನಾಗರಿಕ ವಿಮಾನಗಳ ಹಾರಾಟ ನಿರ್ಬಂಧಿಸಿದೆ.