Thursday, May 26, 2022
spot_img
Homeಕ್ರೈಂಅಜೆಕಾರು : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಅಜೆಕಾರು : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಅಜೆಕಾರು : ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನ, ನಗದು ಕಳ್ಳತನ ಮಾಡಿದ ಘಟನೆ ಫೆ.22ರಂದು ಶಿರ್ಲಾಲು ಗ್ರಾಮದ ಸೂರ್ಯಂತೊಕ್ಲುವಿನಲ್ಲಿ ನಡೆದಿದೆ. ತಾಯಿಯ ಮನೆಗೆಂದು ತೆರಳಿದ್ದ ಮನೆಯ ಮಾಲಕಿ ದೀಪಿಕಾ (32) ಫೆ.23ರಂದು ಮರಳಿ ಬಂದಿದ್ದು, ಈ ವೇಳೆ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮನೆಯ ಮಾಡಿನ ಹೆಂಚನ್ನು ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 1,18,000 ರೂ. ಮೌಲ್ಯದ 29 ½ ಗ್ರಾಂ ಚಿನ್ನದ ಒಡವೆ ಹಾಗೂ ಪರ್ಸ್ ನಲ್ಲಿದ್ದ 15,000 ರೂ. ನಗದನ್ನು ದೋಚಿರುತ್ತಾರೆ. ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!