ಹೆಬ್ರಿ : ಪ್ರೊಪಾತ್ ಅಕಾಡೆಮಿ ಪ್ರೈ. ಲಿ. ರಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬಾಕಸ್ ವೇದಿಕ್ ಮ್ಯಾಥ್ಸ್ ವತಿಯಿಂದ ನಡೆದ ರಾಜ್ಯಮಟ್ಟದ ಅಬಾಕಸ್ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಹೆಬ್ರಿ ಶ್ರೀರಾಮ್ ಟವರ್ ನಲ್ಲಿ ಫೆ. 27ರಂದು ಬಹುಮಾನ ವಿತರಣೆ ನಡೆಯಲಿದೆ. ಅಂದು ಮಧ್ಯಾಹ್ನ 2.30 ಕ್ಕೆ 3ನೇ ರಾಜ್ಯ ಮಟ್ಟದ ಅಬಾಕಸ್ ಮಾನಸಿಕ ಅಂಕಗಣಿತ ಮತ್ತು 2ನೇ ರಾಜ್ಯ ಮಟ್ಟದ ವೇದಿಕ್ ಗಣಿತದಲ್ಲಿ ವಿಜೇತರಿಗೆ ಬಹುಮಾನ ವಿತರಣೆಯಾಗಲಿದೆ. ಹೆಬ್ರಿ ಗ್ರಾಮ ಪಂಚಾಯತ್ ಪಿಡಿಒ ಸದಾಶಿವ ಸರ್ವೆಗಾರ್, ಮಾರ್ಕೆಟಿಂಗ್ ನಿರ್ದೇಶಕ ನರಹರಿ ಆರ್. ಬೋರ್ಕರ್, ದಿನೇಶ್ ಭಾಗವಹಿಸಲಿರುವರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Recent Comments
ಕಗ್ಗದ ಸಂದೇಶ
on