Tuesday, May 17, 2022
spot_img
Homeಸಾಹಿತ್ಯ/ಸಂಸ್ಕೃತಿ2020-21ನೇ ಸಾಲಿನ ಬಯಲಾಟ ಪ್ರಶಸ್ತಿ ಪ್ರಕಟಿಸಿದ ಅಕಾಡೆಮಿ

2020-21ನೇ ಸಾಲಿನ ಬಯಲಾಟ ಪ್ರಶಸ್ತಿ ಪ್ರಕಟಿಸಿದ ಅಕಾಡೆಮಿ

ಬೆಂಗಳೂರು : ಕರ್ನಾಟಕ ಬಯಲಾಟ ಅಕಾಡೆಮಿಯಿಂದ 2020-21ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ 2020-21 ನೇ ಸಾಲಿನ ಗೌರವ ಪ್ರಶಸ್ತಿಗೆ 05 ಜನ ಮಹನೀಯರನ್ನು ಮತ್ತು 10 ಜನ ಮಹನೀಯರನ್ನು ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ. ಗೌರವ ಪ್ರಶಸ್ತಿಯು ತಲಾ ರೂ.50,000ಗಳ ಗೌರವ ಧನ ಹಾಗೂ ಸನ್ಮಾನ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಯು ತಲಾ ರೂ.25,000 ಗಳ ಗೌರವ ಧನ ಹಾಗೂ ಸನ್ಮಾನ ಒಳಗೊಂಡಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಏಪ್ರಿಲ್‌ನಲ್ಲಿ ಬಾಗಲಕೋಟೆಯಲ್ಲಿ ನಡೆಯಲಿದೆ ಎಂದು ಬಯಲಾಟ ಅಕಾಡೆಮಿ ಪ್ರಭಾರ ರೆಜಿಸ್ಟ್ರಾರ್ ಹೇಮಾವತಿ ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.

ಪ್ರಶಸ್ತಿಗೆ ಭಾಜನರಾದ ಐವರು ಮಹನೀಯರು

 1. ನಾಗಮ್ಮ ಕೃಷ್ಣಯ್ಯ, ಸಾ॥ ದೊಡ್ಡಬೋಗನಹಳ್ಳಿ ಗೊಂಬೆಯಾಟ ಮಂಡ್ಯ ಜಿಲ್ಲೆ
 2. ಶಾಂತಪ್ಪ ಬಾಡದ, ಸಾ॥ ಶಿರೂರ ಅಗಸಿ ಬಾಗಲಕೋಟೆ. ದೊಡ್ಡಾಟ, ಬಾಗಲಕೋಟೆ ಜಿಲ್ಲೆ
 3. ಹನುಮಂತಪ್ಪ ಎಲಿಗಾರ, ಸಾ॥ ಅಳವಂಡಿ, ಸಣ್ಣಾಟ, ಕೊಪ್ಪಳ ಜಿಲ್ಲೆ
 4. ಎಮ್.ಎಸ್. ಮಾಳವಾಡ, ಸಾ॥ ಇಂಗಳಗಿ ತಾ॥ ಕುಂದಗೋಳ, ದೊಡ್ಡಾಟ, ಧಾರವಾಡ ಜಿಲ್ಲೆ
 5. ಡಿ. ಬಿ. ಶಿವಣ್ಣ , ಸಾ॥ ಸಿದ್ದಮ್ಮನಹಳ್ಳಿ ತಾ॥ ಜಗಳೂರು, ದೊಡ್ಡಾಟ,ದಾವಣಗೇರಿ ಜಿಲ್ಲೆ
  ವಾರ್ಷಿಕ ಪ್ರಶಸ್ತಿ
  1 ರಾಮಶೆಟ್ಟಿ ಬಂಬುಳಗೆ, ಸಾ॥ ಜಿರ್ಗಾ, ದೊಡ್ಡಾಟ, ಬೀದರ ಜಿಲ್ಲೆ
  2 ನಾಗಪ್ಪ ಸೂರ್ಯವಂಶಿ, ಸಾ॥ ಚಿಕ್ಕಲದಿನ್ನಿ ತಾ॥ ಹುಕ್ಕೇರಿ ,ಸಣ್ಣಾಟ, ಬೆಳಗಾವಿ ಜಿಲ್ಲೆ
  3 ದುರಗವ್ವ ತಂ॥ ದುರಗಪ್ಪ ಮೂಧೋಳ, ಪಾರಿಜಾತ, ಬಾಗಲಕೋಟೆ ಜಿಲ್ಲೆ
  4 ರಾಮಪ್ಪ ಕುರಬರ, ತಾ॥ ಶಿಗ್ಗಾಂವ, ದೊಡ್ಡಾಟ, ಹಾವೇರಿ ಜಿಲ್ಲೆ
  5 ನಿಂಗೌಡ ಪಾಟೀ, ಸಾ॥ ಕೆರೆ ಮಾಸ್ತಿಹೊಳಿ ತಾ॥ ಹುಕ್ಕೇರಿ, ಸಣ್ಣಾಟ, ಬೆಳಗಾವಿ ಜಿಲ್ಲೆ
  6 ರೇವಗೊಂಡ ಸಿದರಾವ ಬಿರಾದರ, ಸಾ॥ ಕೊಂಕಣಗಾಂವ ತಾ॥ ಚಡಚಣ, ಬಯಲಾಟ, ವಿಜಯಪುರ ಜಿಲ್ಲೆ
  7 ಕೆ.ಹೇಮಾರಡ್ಡಿ, ಎಮ್ಮಿಗನೂರು, ಬಯಲಾಟ, ಬಳ್ಳಾರಿ ಜಿಲ್ಲೆ
  8 ಡಾ.ಟಿ.ಗೋವಿಂದರಾಜು, ಬೆಂಗಳೂರು, ತೊಗಲು ಗೊಂಬೆ. ಬೆಂಗಳೂರು ನಗರ
  9 ಜಿ.ವೀರನಗೌಡ ತಂದೆ ಜಿ.ಚಂದ್ರಪ್ಪ , ಸಿರಗುಪ್ಪ , ದೊಡ್ಡಾಟ, ಬಳ್ಳಾಾರಿ ಜಿಲ್ಲೆ
  10 ಶಿವಪ್ಪ ಕುಂಬಾರ, ಸಾ॥ ಚಮಕೇರಿ ತಾ॥ ಅಥಣಿ. ಪಾರಿಜಾತ, ಬೆಳಗಾವಿ ಜಿಲ್ಲೆ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!