ಕಾರ್ಕಳ : ಮುಡಾರು ಗ್ರಾಮದ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಸ್ವಚ್ಛ ಬಜಗೋಳಿ ಬ್ರಿಗೇಡ್ ತಂಡ ಸದಸ್ಯರು ಪ್ರತಿ ರವಿವಾರ ಒಂದು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಬೆಳಿಗ್ಗೆ 7 ಗಂಟೆಯಿಂದ 8 ಗಂಟೆವರೆಗೆ ಮುಡಾರು ಗ್ರಾಮದಲ್ಲಿನ ರಸ್ತೆ ಬದಿ, ಶಾಲೆ, ಸಾರ್ವಜನಿಕ ಸ್ಥಳ, ಡಿವೈಡರ್, ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಕೈಂಕರ್ಯ ನಡೆಸುತ್ತಾರೆ.
ತಾಲೂಕಿನ ಪ್ರತಿ ಗ್ರಾಮದಲ್ಲೂ ಇಂತಹ ಒಂದು ತಂಡವಿದ್ದಲ್ಲಿ ಇಡೀ ತಾಲೂಕೇ ಸ್ವಚ್ಛವಾಗಿ, ಸುಂದರವಾಗಿರಲಿದೆ. ಸ್ಥಳೀಯ ಆಡಳಿತವೂ ಈ ನಿಟ್ಟಿನಲ್ಲಿ ಗಮನ ಹರಿಸುವುದು ಅಗತ್ಯ. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ದಂಡ ವಿಧಿಸುವುದರೊಂದಿಗೆ ಬ್ಯಾನರ್, ಫ್ಲೆಕ್ಸ್ ಅಳವಡಿಕೆಗೆ ಕಡಿವಾಣ ಹಾಕಬೇಕಿದೆ.
ಸ್ವಚ್ಛತಾ ತಂಡದಲ್ಲಿ ಪ್ರಮುಖವಾಗಿ ಸತೀಶ್ ಮರಾಠೆ, ರಮಾನಾಥ್, ಭಾಸ್ಕರ್, ಸಚಿನ್, ಪದ್ಮಾವತಿ ಟೀಚರ್, ಮಾಜಿ ಪಂಚಾಯತ್ ಅಧ್ಯಕ್ಷೆ ಗೀತಾ ಪಾಟ್ಕರ್, ಆರತಿ ಅಶೋಕ್, ಪ್ರಶಾಂತ್, ಪಾಪಣ್ಣ, ಸುಶಾಂತ್ ಆಚಾರ್ಯ, ಗಾಯತ್ರಿ, ಪಾರಿತೋಷ್, ಜಯಕೀರ್ತಿ, ಜಿನೇಶ್, ಅಶೋಕ್, ನವೀನ್, ಅಪ್ಪಣ್ಣ, ಗುಲಾಬಿ ದೇವಾಡಿಗ, ಸುರೇಶ್ ದೇವಾಡಿಗ, ಕೃಷ್ಣದಾಸ್ ಪ್ರಭು ಪ್ರತಿ ವಾರ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.