Thursday, May 26, 2022
spot_img
Homeಸುದ್ದಿಹೆಬ್ರಿ : ವ್ಯಕ್ತಿಯ ಕಾಲಿನ ಮೇಲೆ ಹರಿದ ಲಾರಿ

ಹೆಬ್ರಿ : ವ್ಯಕ್ತಿಯ ಕಾಲಿನ ಮೇಲೆ ಹರಿದ ಲಾರಿ

ಹೆಬ್ರಿ : ವ್ಯಕ್ತಿಯ ಕಾಲಿನ ಮೇಲೆ ಲಾರಿ ಹರಿದು ಕಾಲು ಜಖಂಗೊಂಡ ಘಟನೆ ಹೆಬ್ರಿ ಗ್ರಾಮದ ನಿಸರ್ಗಧಾಮ ಎಂಬಲ್ಲಿ ಫೆ. 21ರಂದು ನಡೆದಿದೆ. ಹೆಬ್ರಿ – ಸೋಮೇಶ್ವರ ರಸ್ತೆಯ ಬಳಿ ಘಟನೆ ಸಂಭವಿಸಿದ್ದು, ಪ್ರದೀಪ್‌ ಕುಮಾರ್‌ (38) ಎಂಬವರು ಗಾಯಗೊಂಡಿದ್ದಾರೆ. ಮಾರಿ ಪೂಜೆಯ ಪ್ರಯುಕ್ತ ರಸ್ತೆ ಬದಿ ಪ್ರದೀಪ್‌ ನಿಂತುಕೊಂಡಿದ್ದು, ಹೆಬ್ರಿಯಿಂದ ಆಗುಂಬೆ ಕಡೆಗೆ ಸಾಗುತ್ತಿದ್ದ ಲಾರಿಯನ್ನು ಅದರ ಚಾಲಕ ಸತೀಶ್‌ ನಾಯ್ಕ ವೇಗವಾಗಿ ಚಲಾಯಿಸಿದ್ದರಿಂದ ಲಾರಿಯ ಮುಂಭಾಗದ ಚಕ್ರ ಪ್ರದೀಪ್‌ ಅವರ ಕಾಲಿನ ಮೇಲೆ ಹರಿದು ಎಡಕಾಲಿನ ಪಾದ ಜಖಂಗೊಂಡಿರುತ್ತದೆ. ಆಸ್ಪತ್ರೆಯ ಖರ್ಚನ್ನು ಲಾರಿಯವರು ನೀಡುತ್ತೇನೆಂದು ಭರವಸೆ ನೀಡಿ ನಂತರ ಬಿಲ್‌ ಪಾವತಿಸಲು ನಿರಾಕರಿಸಿರುತ್ತಾರೆ. ಹೀಗಾಗಿ ದೂರು ನೀಡುವಾಗ ವಿಳಂಬವಾಗಿರುವುದಾಗಿ ಹೆಬ್ರಿ ಪೊಲೀಸ್‌ ಠಾಣೆಗೆ ಪ್ರದೀಪ್‌ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!