Wednesday, July 6, 2022
spot_img
Homeಸುದ್ದಿಪೆರ್ವಾಜೆ ಪ್ರೌಢಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಸಮಾರಂಭ

ಪೆರ್ವಾಜೆ ಪ್ರೌಢಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಸಮಾರಂಭ

ಕಾರ್ಕಳ : ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಫೆ. 22 ರಂದು ಸ್ಟೂಡೆಂಟ್ ಪೊಲೀಸ್ ಕೆಡೆಟ್ ನ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಡಿ.ವೈ.ಎಸ್.ಪಿ. ಶರತ್ ಎಂ. ಎ. ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ದೇಶ ಸೇವೆ, ಸಾಮಾಜಿಕ ಸೇವೆ ಮೈಗೂಡಿಸಿಕೊಳ್ಳಬೇಕು. ಪೆರ್ವಾಜೆ ಶಾಲೆಯಲ್ಲಿ ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಲಾಗುತ್ತಿದೆ ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ನಗರ ಠಾಣೆಯ ಎಸ್.ಐ. ಪ್ರಸನ್ನ , ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಅಗ್ನಿಶಾಮಕ ಇಲಾಖೆಯ ಕೇಶವ್, ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ, ಯೋಗ ಗುರು ಅಶೋಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ
ಪೊಲೀಸ್‌ ಕೆಡೆಟ್‌ ಮಾರ್ಗದರ್ಶಕ ಮಲ್ಲಿಕಾರ್ಜುನ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಮುಖ್ಯಶಿಕ್ಷಕಿ ಹರ್ಷಿಣಿ ಕೆ. ಸ್ವಾಗತಿಸಿ, ಕು. ಲಹರಿ ಮತ್ತು ಶಿಕ್ಷಕಿ ವೇದಾವತಿ ನಿರೂಪಿಸಿದರು. ಸಹಶಿಕ್ಷಕಿ ಶೈಲಜಾ ಹೆಗ್ಡೆ ವಂದಿಸಿದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!