Thursday, May 26, 2022
spot_img
Homeಸ್ಥಳೀಯ ಸುದ್ದಿನಾಟಕ ಬದುಕಿಗೆ ಉತ್ತಮ ಸಂದೇಶ - ಕತ್ತಲ್‌ಸಾರ್‌

ನಾಟಕ ಬದುಕಿಗೆ ಉತ್ತಮ ಸಂದೇಶ – ಕತ್ತಲ್‌ಸಾರ್‌


ಕಾರ್ಕಳ : ವ್ಯಕ್ತಿತ್ವ ಬೆಳವಣಿಗೆಗೆ ನಾಟಕಗಳು ಸಹಕಾರಿಯಾಗಿದ್ದು, ಬದುಕಿಗೆ ಉತ್ತಮ ಸಂದೇಶ ನೀಡುವುದು. ಪುಸ್ತಕಗಳಿಂದ ತಿಳಿದುಕೊಳ್ಳಲಾಗದ ವಿಷಯಗಳನ್ನು ನಾಟಕ ಪ್ರದರ್ಶನದಿಂದ ತಿಳಿಯುವಂತಾಗುವುದು. ಮಕ್ಕಳಲ್ಲಿ ಕಲೆಯ ಕುರಿತು ಅಭಿರುಚಿ ಮೂಡಿಸುವ ಕಾರ್ಯವನ್ನು ಹೆತ್ತವರು ಮಾಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸರ್ ಹೇಳಿದರು.

ಅವರು ಫೆ. 20ರಂದು ಜ್ಯೋತಿ ಯುವಕ ಮಂಡಲ ಮತ್ತು ಜ್ಯೋತಿ ಮಹಿಳಾ ಮಂಡಲದ ವಜ್ರ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ತುಳು ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ತುಳು ನಾಟಕ, ಕಂಬಳ, ಭೂತಾರಾಧನೆ ತುಳು ಭಾಷೆ ಜೀವಂತವಾಗಿಸುವಲ್ಲಿ ತನ್ನ ಕೊಡುಗೆ ನೀಡಿದೆ. ತುಳು ನಾಟಕ ಪ್ರತೀ ಗ್ರಾಮಗಳಲ್ಲಿ ಸಂಘಟಿತವಾಗಬೇಕು. ಸಮಾಜಮುಖಿ ಕಾರ್ಯಗಳೊಂದಿಗೆ ನಿರಂತರವಾಗಿ ಅರ್ಥ ಪೂರ್ಣವಾದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿರುವ ಜ್ಯೋತಿ ಯುವಕ ಮಂಡಲ, ಜ್ಯೋತಿ ಮಹಿಳಾ ಮಂಡಲದ ಕಾರ್ಯ ಅಭಿನಂದನೀಯವೆಂದು ಕತ್ತಲ್‌ಸಾರ್‌ ಬಣ್ಣಿಸಿದರು.

ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್‌. ರಾಜು, ಈದು ಗ್ರಾ.ಪಂ. ಉಪಾಧ್ಯಕ್ಷ ಜಯ ಕುಮಾರ್‌ ಜೈನ್, ಯುವಕ ಮಂಡಲದ ನಿರ್ದೇಶಕ ರವೀಂದ್ರನಾಥ ಹೆಗ್ಡೆ, ಗೌರವಾಧ್ಯಕ್ಷ ವಾಮನ ರಾವ್, ಮಹಿಳಾ ಮಂಡಲ ಗೌರವಾಧ್ಯಕ್ಷೆ ಯಶಾ, ಜ್ಯೋತಿ ಮಹಿಳಾ ಮಂಡಲ ಅಧ್ಯಕ್ಷೆ ಅನಿತಾ ಎಸ್., ಸಂಘದ ಹಿರಿಯ ಸದಸ್ಯ ಅಬ್ದುಲ್‌ ಶುಕ್ರು ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಶುಭದ ರಾವ್ ಸ್ವಾಗತಿಸಿ, ರಶ್ಮಿ ನಿರೂಪಿಸಿದರು. ಹರೇಂದ್ರ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!