ಫೆ. 25ರಿಂದ ಗಾಂಧಿಮೈದಾನದಲ್ಲಿ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟ

ಕಾರ್ಕಳ : ಸೌಹಾರ್ದ ಫ್ರೆಂಡ್ಸ್ ಕಾರ್ಕಳ ನೇತೃತ್ವದಲ್ಲಿ ಸೌಹಾರ್ದ ಟ್ರೋಫಿ-2022 ಫುಲ್ ಗ್ರೌಂಡ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಗಾಂಧಿ ಮೈದಾನದಲ್ಲಿ ಫೆ. 25 ರಿಂದ 27ರ ವರೆಗೆ ನಡೆಯಲಿದೆ. ಫೆ.25ರಂದು ಬೆಳಗ್ಗೆ 8.30 ಗಂಟೆಗೆ ಸವಿತಾ ಗ್ರೂಪ್ಸ್‌ನ ಶಿವಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಹಿರಿಯ ನ್ಯಾಯವಾದಿ ಶೇಖರ ಮಡಿವಾಳ ಅಧ್ಯಕ್ಷತೆ ವಹಿಸಲಿದ್ದು, ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ (ಸೂರಿ), ಕಾರ್ಯದರ್ಶಿ ವಿಶ್ವನಾಥ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಪೂಜಾ ಕನ್ಸ್ಟ್ರಕ್ಷನ್ ನ ಪ್ರೊ. ಅಚ್ಚುತ, ಪುರಸಭಾ ಸದಸ್ಯರಾದ ಪ್ರತಿಮಾ ರಾಣೆ, ಪ್ರದೀಪ್ ರಾಣೆ, ನ್ಯೂ ಸ್ಟಾರ್ ಕ್ಲಬ್ ನ ಅಧ್ಯಕ್ಷ ಗಣೇಶ್ ದೇವಾಡಿಗ, ದಯಾನಂದ ದೇವಾಡಿಗ ಅತಿಥಿಗಳಾಗಿ ಭಾಗವಹಿಸಲಿರುವರು.

ಸಮಾರೋಪ
ಸಂಜೆ ನಡೆಯುವ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಂಧನ‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ವಹಿಸಲಿದ್ದಾರೆ. ಎಸ್.ಕೆ.ಎಸ್. ಕಾರ್ಕಳ ಇನ್‌ಫ್ರಾ ಪ್ರೋಜೆಕ್ಟ್ ನ ಎಂ.ಡಿ. ಸುಜಯ್ ಕುಮಾರ್ ಶೆಟ್ಟಿ, ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಸುರೇಂದ್ರ ಶೆಟ್ಟಿ, ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಮಾಜಿ ಅಧ್ಯಕ್ಷ ಸುಬಿತ್‌ ಎನ್.ಆರ್.‌, ಶ್ರೇಷ್ಠ ಸ್ವೀಟ್ಸ್ ಮಾಲಕ ಅನಂತಕೃಷ್ಣ ಶೆಣೈ,‌ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಉದ್ಯಮಿ ರಾಜೇಶ್‌ ರಾವ್‌, ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ, ಕಾರ್ಕಳ ಬಂಟ್ಸ್ ಯುವ ಸಂಘದ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಶಿಶಾ ಫುಡ್ ಕೋರ್ಟ್ ಮಾಲಕ ಶಾಕೀರ್ ಹುಸೇನ್, ಅತ್ರಿ ಇನ್ಫ್ರಾಕೋನ್ ಮಾಲಕ ಪ್ರಸನ್ನ ಶೆಟ್ಟಿ, ಪೃಥ್ವಿ ಕನ್ಸ್ಟ್ರಕ್ಷನ್ ನ ಮಾಲಕ ನವೀನ್ ರಾವ್, ಕರಾವಳಿ ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲಕ ಪ್ರಶಾಂತ್ ಶೆಟ್ಟಿ, ಅಶೋಕ್ ಮಡಿವಾಳ ಅತಿಥಿಗಳಾಗಿ ಭಾಗವಹಿಸಲಿರುವರು.

ಸನ್ಮಾನ

ಸಮಾರೋಪ ಸಮಾರಂಭದಲ್ಲಿ ಸುರಕ್ಷಾ ಆಶ್ರಮದ ಆಯಿಷಾ ಅವರನ್ನು ಸನ್ಮಾನಿಸಲಾಗುವುದು ಎಂದು ಸೌಹಾರ್ದ ಫ್ರೆಂಡ್ಸ್ ತಿಳಿಸಿದೆ.













































error: Content is protected !!
Scroll to Top