Thursday, May 19, 2022
spot_img
Homeಸುದ್ದಿಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ-ಭತ್ಯೆ ಶೇಕಡಾ 50ರಷ್ಟು ಹೆಚ್ಚಳ

ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ-ಭತ್ಯೆ ಶೇಕಡಾ 50ರಷ್ಟು ಹೆಚ್ಚಳ

ಬೆಂಗಳೂರು : ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ-ಭತ್ಯೆ ಶೇಕಡಾ 50ರಷ್ಟು ಹೆಚ್ಚಳಕ್ಕೆ ಸದನ ಅಂಗೀಕಾರ ನೀಡಲಾಗಿದೆ. ಸಚಿವ ಕೆ.ಎಸ್.‌ ಈಶ್ವರಪ್ಪ ಅವರು ರಾಷ್ಟ್ರಧ್ವಜ ಕುರಿತು ನೀಡಿದ್ದ ಹೇಳಿಕೆಯನ್ನು ಹಿಡಿದುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಅವರ ವಜಾಕ್ಕೆ ಆಗ್ರಹಿಸಿ ಕಳೆದ 5 ದಿನಗಳಿಂದ ಸದನದಲ್ಲಿ ಗದ್ದಲವೇ ನಡೆದಿತ್ತು. ಇದರ ಮಧ್ಯೆ ಮಂಗಳವಾರ ಸದನದಲ್ಲಿ ಕರ್ನಾಟಕ ಸಚಿವರ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2022ಕ್ಕೆ ಅಂಗೀಕಾರ ದೊರೆತಿದೆ.
ಹೀಗಾಗಿ ವಿಧಾನಸಭೆ, ವಿಧಾನ ಪರಿಷತ್ ಎರಡೂ ಸದನಗಳ ಶಾಸಕರ, ಸ್ಪೀಕರ್, ಉಪ ಸ್ಪೀಕರ್, ಸಭಾಪತಿ, ಉಪ ಸಭಾಪತಿಗಳ ವೇತನ ಶೇ. 50ರಷ್ಟು ಹೆಚ್ಚಾಗಲಿದೆ.

ಹೊಸ ನಿಯಮದಂತೆ 50 ಸಾವಿರ ರೂ. ಸಂಬಳ ಪಡೆಯುತ್ತಿದ್ದ ಮುಖ್ಯಮಂತ್ರಿ 75 ಸಾವಿರ ರೂ. ಪಡೆಯಲಿದ್ದಾರೆ. ಸಂಪುಟ ದರ್ಜೆಯ ಸಚಿವರುಗಳ ಸಂಬಳ 40 ಸಾವಿರ ರೂ. ಗಳಿಂದ 60 ಸಾವಿರ ರೂ. ಏರಿಕೆಯಾಗಲಿದ್ದು, ಮುಖ್ಯಮಂತ್ರಿ ಮತ್ತು ಸಚಿವರ ಭತ್ಯೆ ವಾರ್ಷಿಕ 3 ಲಕ್ಷ ರೂ. ನಿಂದ ೪.೫ ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ. ಸಚಿವ ಸಂಪುಟ ದರ್ಜೆಯ ಮಂತ್ರಿಗಳ ತಿಂಗಳ ಮನೆ ಬಾಡಿಗೆ ಭತ್ಯೆ 80 ಸಾವಿರ ರೂ. ಗಳಿಂದ 1.20 ಲಕ್ಷ ರೂ. ಗಳವರೆಗೆ ಏರಿಕೆಯಾಗಲಿದೆ. ಸಚಿವರುಗಳ ಮನೆ ನಿರ್ವಹಣೆ ವೆಚ್ಚ 20 ಸಾವಿರ ರೂ. ಗಳಿಂದ 30 ಸಾವಿರ ರೂ.ಗಳ ವರೆಗೆ ಏರಿಕೆಯಾಗಿದೆ.
ಮುಖ್ಯಮಂತ್ರಿ, ಸಚಿವರ ಈಗಿನ 1 ಸಾವಿರ ಲೀಟರ್ ಪೆಟ್ರೋಲ್ ಬೆಲೆಯನ್ನು 2 ಸಾವಿರ ಲೀಟರ್ ಪೆಟ್ರೋಲ್ ಬೆಲೆಯಷ್ಟು ವಾಹನ ಭತ್ಯೆಯನ್ನು ನೀಡಲಾಗುತ್ತದೆ.

ಶಾಸಕರ ಸಂಬಳ 25 ಸಾವಿರ ರೂ.ಗಳಿಂದ 40 ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ. ಶಾಸಕರ ನಿವೃತ್ತಿ ವೇತನ 40 ರಿಂದ 50 ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!