ಕಾರ್ಕಳ : ದೇಶದ ಸಮಗ್ರ ಅಭ್ಯುದಯ ಮತ್ತು ಶಾಂತಿ ಸೌಹಾರ್ದತೆಯ ಪುನರುತ್ಥಾನಕ್ಕೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಮತದಾರರ ನಿರೀಕ್ಷೆಯೂ ಅದೇ ಆಗಿದೆ. ಆ ನೆಲೆಯಲ್ಲಿ ಪಕ್ಷವನ್ನು ಜನಪರವಾಗಿ ಸುಭಧ್ರಗೊಳಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ ಎಂದು ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವ ನಾರಾಯಣ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ಕಟೀಲ್ ಇಂಟರ್ ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಮಾತನಾಡಿದರು.
ಬಿಜೆಪಿಗೆ ಪಾಠ ಕಲಿಸಬೇಕು
ಕಾಂಗ್ರೆಸ್ ಪಕ್ಷದ ಸದಸ್ಯನಾಗಲು ಇದೊಂದು ಸುವರ್ಣ ಅವಕಾಶ. ಪ್ರತೀ ಬೂತ್ ಮಟ್ಟದಲ್ಲಿ ಕನಿಷ್ಟ ನೂರು ಸದಸ್ಯರನ್ನು ನೊಂದಾಯಿಸುವುದು ನಮ್ಮ ಗುರಿ. ಆ ಮೂಲಕ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆ ದುರ್ಬಳಕೆ ಮಾಡಿಕೊಂಡೇ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು ಎಂದವರು ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಉಡುಪಿ ಡಿಸಿಸಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸದಸ್ಯತ್ವ ನೊಂದಣಿ ಕುರಿತು ಮಾತನಾಡಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ವಿಧಾನ ಸಭಾ ಕ್ಷೇತ್ರ ಸದಸ್ಯತ್ವ ನೊಂಣಿಯ ಕೋ ಆರ್ಡಿನೇಟರ್ ಅಶ್ವಿನಿ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಸಹ ಕೋರ್ಡಿನೇಟರ್ ಸುರೇಂದ್ರ ಶೆಟ್ಟಿ, ಡಿಜಿಟಲ್ ನೊಂದಣಿಯ ರಾಜ್ಯ ತಾಂತ್ರಿಕ ತರಬೇತುದಾರ ಶರೀನ್ ಮಂಗಳೂರು, ಡಿಸಿಸಿ ಉಪಾಧ್ಯಕ್ಷರಾದ ಸುಧಾಕರ ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ರಾಜ್ಯ ಕೃಷಿ ಘಟಕ ಕಾರ್ಯದರ್ಶಿಉದಯ ವಿ. ಶೆಟ್ಟಿ, ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ, ಮಾಜಿ ಬ್ಲಾಕ್ ಅಧ್ಯಕ್ಷ ಶೇಖರ ಮಡಿವಾಳ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಶಾಂತ್ ಸುಧಾಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿ’ಸೋಜಾ, ರಂಜನಿ ಹೆಬ್ಬಾರ್, ಮಹಿಳಾ ನಗರಾಧ್ಯಕ್ಷೆ ಕಾಂತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ ಸ್ವಾಗತಿಸಿ, ದಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ವಂದಿಸಿದರು.