ಕಾರ್ಕಳ : ಜೋಡುರಸ್ತೆಯ ಪ್ರೈಮ್ ಮಾಲ್ ನಲ್ಲಿ ಫೆ. 21ರಂದು ಪ್ರೈಮ್ ಮಾರ್ಟ್ ಸೂಪರ್ ಮಾರ್ಕೆಟ್ ಅನ್ನು ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಮಣಿ ಸಂಪತ್, ನ್ಯಾಯವಾದಿ ಸುವ್ರತ್ ಕುಮಾರ್, ಉದ್ಯಮಿ ಮಹಾವೀರ ಹೆಗ್ಡೆ, ಸಿವಿಲ್ ಇಂಜನೀಯರ್ ದಿವಾಕರ ಶೆಟ್ಟಿ, ಪುರಸಭಾ ಸದಸ್ಯ ಅಶ್ಫಕ್ ಅಹಮ್ಮದ್, ಉದ್ಯಮಿ ರವಿಪ್ರಕಾಶ್ ಪ್ರಭು ಉಪಸ್ಥಿತರಿದ್ದರು.

ವಿಶೇಷತೆ
ಮನೆಗೆ ಬೇಕಾಗುವ ಎಲ್ಲ ಸಾಮಗ್ರಿಗಳು ಒಂದೇ ಸೂರಿನಡಿ ಲಭ್ಯ. ಪ್ರತಿ ಖರೀದಿಗೆ ಗಿಫ್ಟ್ ಕೂಪನ್, ಬಂಪರ್ ಬಹುಮಾನವಿದ್ದು, ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪಾಲುದಾರ ಸಂಪತ್ ಜೈನ್, ಸಚಿನ್ ಪಿ. ಸಾಲ್ಯಾನ್ ಮನವಿ ಮಾಡಿಕೊಂಡರು.