ಮಾ. 10 – 20 : ಕಾರ್ಕಳ ಉತ್ಸವ

ಕಾರ್ಕಳ : ಭಾಷೆ, ಸಂಸ್ಕೃತಿ, ಕಲೆಯ ಸಂಭ್ರಮ ಕಾರ್ಕಳ ಉತ್ಸವ ಮಾ. 10ರಿಂದ 20ರ ವರೆಗೆ ಮೇಳೈಸಲಿದೆ. ಫೆ. 21ರಂದು ಕಾರ್ಕಳ ಸ್ವರಾಜ್‌ ಮೈದಾನದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌, ಕಾರ್ಕಳ ನಗರದಲ್ಲಿನ ದೇವಸ್ಥಾನಗಳ ಮೋಕ್ತೇಸರರು, ಅಧ್ಯಕ್ಷರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಮಾ. 10 ರಂದು ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ನಲ್ಲಿ ಸಂಜೆ 4 ಗಂಟೆಗೆ ಯಕ್ಷ ರಂಗಾಯಣ ಭೂಮಿಪೂಜೆ, 4.30 ಕ್ಕೆ ಹೆಲಿಕಾಪ್ಟರ್‌ ವಿಹಾರಕ್ಕೆ ಚಾಲನೆ ನೀಡಲಾಗುವುದು.

ಗಾಂಧಿ ಮೈದಾನದಲ್ಲಿನ ಕಾರ್ಯಕ್ರಮ

ಮಾ. 10ರಂದು ಗಾಂಧಿ ಮೈದಾನದಲ್ಲಿ ಸಂಜೆ 5 ಗಂಟೆಗೆ ಕಾರ್ಕಳ ಉತ್ಸವ ಉದ್ಘಾಟನೆ, 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷರಂಗಾಯಣ ತಂಡದಿಂದ ದೂತವಾಕ್ಯ ನಾಟಕ ಪ್ರದರ್ಶನ, ಸಂಜೆ 7 ಗಂಟೆಗೆ ದೃಶ್ಯಕಲಾ ಕಾರ್ಯಕ್ರಮ ನಡೆಯಲಿದೆ.
ಮಾ. 11ರ ಸಂಜೆ 6 ಗಂಟೆಯಿಂದ 10.30ರ ವರೆಗೆ ಕಾರ್ಕಳದ ವಿವಿಧ ಯುವಕ ಮಂಡಲಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಮಾ. 12ರ ಸಂಜೆ 6 ರಿಂದ 10.30ರ ವರೆಗೆ ಮೋಹನ್‌ ಸದಾಶಿವ ಶೇರಿಗಾರ್‌ ತಂಡದಿಂದ ನಾದಸ್ವರ, ಸತ್ಯನಾಪುರದ ಸಿರಿ ಶ್ರೀ ಲತನಾಗರಾಜ್‌ ತಂಡದಿಂದ ತುಳು ನೃತ್ಯ ರೂಪಕ, ಸಸಿಹಿತ್ಲು ಯುವಕ ಮಂಡಲದಿಂದ ಜಾನಪದ ವೈಭವ, ರಂಗಮನೆ ಸುಳ್ಯ ತಂಡದಿಂದ ಮಕ್ಕಳ ಮಾಯಾಲೋಕ, ಶ್ರೀ ಕೊಗ್ಗ ಭಾಸ್ಕರ ಕಾಮತ್‌ ಉಪ್ಪಿನ ಕುದುರು ಅವರಿಂದ ಬೊಂಬೆಯಾಟ ಪ್ರದರ್ಶನ ನಡೆಯಲಿದೆ.

ಮಾ. 12ರಂದು ಹೆಬ್ರಿಯಲ್ಲಿ ಸಂಜೆ 6 ರಿಂದ 8.45ರ ವರೆಗೆ ಜಾಗೋ ಹಿಂದೂಸ್ತಾನಿ ಮತ್ತು ಸ್ವರ ನಿನಾದ್‌ ದೇಶ ಭಕ್ತಿಗೀತೆ ಗಾಯನ ಕಾರ್ಯಕ್ರಮ, ಪ್ರಹ್ಲಾದ್‌ ಆಚಾರ್ಯ ಬೆಂಗಳೂರು ಅವರಿಂದ ಮಾತನಾಡುವ ಗೊಂಬೆ ಮತ್ತು ನೆರಳಿನಾಟ, ಕಲಾಶ್ರೀ ಬೆದ್ರ ರಮೇಶ್‌ ಶೆಟ್ಟಿ, ತೆಲಿಕೆ ತೆನಾಲಿ ಸುನಿಲ್‌ ನೆಲ್ಲಿಗುಡ್ಡೆ, ಪಲ್ಲವಿ ಕಲಾವಿದೆರ್‌ ದಿನೇಶ್‌ ಪ್ರಭು ಅವರ ತಂಡಗಳಿಂದ ಹೆಬ್ರಿಯಲ್ಲಿ ಸಂಜೆ 9 ಗಂಟೆಯಿಂದ 10.30ರ ವರೆಗೆ ಬಲೆ ತೆಲಿಪಾಲೆ ತಂಡದಿಂದ ತುಳು ಹಾಸ್ಯ ಜರುಗಲಿದೆ.

ಮಾ. 11 ಮತ್ತು 12 ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದಲ್ಲಿ ನೆಲೆಸಿರುವ ಚಿಂತನೆಗಳ ವಿಚಾರ ಸಂಕಿರಣ ನಡೆಯಲಿದೆ. ಮಾ.13 ರಂದು ಸಂಜೆ 6 ರಿಂದ 10.15ರ ವರೆಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಕೊಂಕಣಿ ಭಾವಗೀತೆ, ದೇಶಭಕ್ತಿಗೀತೆ, ಮಂಥರಲೆ ವಿಜಯ, ಕೊಂಕಣಿ ಹಾಸ್ಯ ಯಯ್ಯಾ ಹಾಸೊಯ್ಯಾ, ಹಾಸ್ಯ ಪ್ರಹಸನ ಕಾರ್ಯಕ್ರಮ. ಸಂಜೆ 8.15ರಿಂದ 10.15ರ ವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ʼತುಳು ಜಾನಪದ ವೈಭವʼ ತುಳುನಾಡಿನ ಪರಂಪರೆಯಲ್ಲಿನ ಹಾಸ್ಯರಸ ಸಂದೇಶ ಕಾರ್ಯಕ್ರಮ ಗಾಂಧಿ ಮೈದಾನದಲ್ಲಿ ಜರುಗಲಿರುವುದು.

ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರ್ಕಳ ತಹಶಿಲ್ದಾರ್‌‌ ಕೆ. ಪುರಂದರ್‌, ಗೇರು ನಿಗಮ ಮಂಡಳಿಯ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ತಾಲೂಕು ಪಂಚಾಯತ್‌ ಇಒ ಗುರುದತ್ತ್‌ ಎನ್., ಹೆಬ್ರಿ ಇಒ ಶಶಿಧರ್‌, ಶ್ರೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಜಯರಾಮ್‌ ಪ್ರಭು, ಶ್ರೀ ಅನಂತಪದ್ಮನಾಭ ದೇವಳದ ಆಡಳಿತ ಮೊಕ್ತೇಸರ ಪ್ರಶಾಂತ್‌ ಭಟ್‌, ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಆಚಾರ್‌, ವೀರಭದ್ರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವರಾಯ ಶೆಟ್ಟಿಗಾರ, ಶ್ರೀ ಮಹಾಮ್ಮಾಯಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ, ಸಿದ್ದಿವಿನಾಯಕ ದೇವಳದ ಮೊಕ್ತೇಸರ‌ ವಿಘ್ನೇಶ್ ಪಾಠಕ್‌,‌ ಶ್ರೀ ಕ್ಷೇತ್ರ ಆನೆಕೆರೆ ದೇವಳದ ಮೊಕ್ತೇಸರ ಭಾಸ್ಕರ ಕೊಟ್ಯಾನ್, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಎಸಿಎಫ್‌ ಸತೀಶ್‌ ಆಚಾರ್‌ ಉಪಸ್ಥಿತರಿದ್ದರು.
ಶಿಕ್ಷಕ ಗಣೇಶ್‌ ಜಾಲ್ಸೂರು ಸ್ವಾಗತಿಸಿ, ಯೋಗೀಶ್‌ ಕಿಣಿ ಕಾರ್ಕಳ ಗೀತೆ ಹಾಡಿದರು. ಉತ್ಸವ ಸಮಿತಿ ಪ್ರಬಂಧಕ ಹರೀಶ್‌ ನಾಯಕ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





























































































































































































































error: Content is protected !!
Scroll to Top