Tuesday, July 5, 2022
spot_img
Homeಸುದ್ದಿಕಾರ್ಕಳ ಬಸ್‌ ನಿಲ್ದಾಣ ಬಳಿ ಬಜರಂಗದಳ ವತಿಯಿಂದ ಪ್ರತಿಭಟನೆ

ಕಾರ್ಕಳ ಬಸ್‌ ನಿಲ್ದಾಣ ಬಳಿ ಬಜರಂಗದಳ ವತಿಯಿಂದ ಪ್ರತಿಭಟನೆ

ಹಿಂದೂ ಕಾರ್ಯಕರ್ತರ ಹತ್ಯೆಗೈದ ಆರೋಪಿಗಳನ್ನು ಎನ್‌ ಕೌಂಟರ್‌ ಮಾಡಿ – ದೇವಿಪ್ರಸಾದ್‌

ಕಾರ್ಕಳ : ದೇಶ ವಿಭಜನೆಯಾಗುವ ಸಂದರ್ಭದಲ್ಲಿ ಮುಸ್ಲಿಮರಿಗಾಗಿ ಪಾಕಿಸ್ತಾನ, ಬಾಂಗ್ಲಾ ಎಂದು ಭಾರತವನ್ನು ಭಾಗ ಮಾಡಿಕೊಡಲಾಯಿತು. ನಮ್ಮ ದೇಶದಲ್ಲಿದ್ದುಕೊಂಡೇ ಇಲ್ಲಿನ ಸಂಸ್ಕೃತಿ, ಕಾನೂನಿಗೆ ಗೌರವ ಕೊಡದವರು ಅಲ್ಲಿಗೆ ಹೋಗಿ. ಅಲ್ಲಿ ಹಿಜಾಬ್ ಆದರೂ ಹಾಕಿಕೊಳ್ಳಿ ಎಂದು ವಿಹಿಂಪ ವಿಭಾಗೀಯ ಕಾರ್ಯದರ್ಶಿ ದೇವಿ ಪ್ರಸಾದ್‌ ಶೆಟ್ಟಿ ಹೇಳಿದರು.

ಅವರು ಫೆ. 21ರಂದು ಕಾರ್ಕಳ ಬಸ್‌ ನಿಲ್ದಾಣ ಬಳಿ ಹರ್ಷ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಭಜರಂಗದಳ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಗೆ ಬರುವ ಸಮಯ ಹಿಜಾಬ್ ತೆಗೆದು ಬನ್ನಿ. ದೇಶದ ಸಂಸ್ಕೃತಿ, ಕಾನೂನು ಗೌರವಿಸುವುದನ್ನು ಮೊದಲು‌ ಕಲಿಯಿರಿ.
ದೇಶ, ಧರ್ಮಕ್ಕಾಗಿ ಬಲಿದಾನ ಮಾಡಲು ಬಜರಂಗದಳದಲ್ಲಿ ಕಾರ್ಯಕರ್ತರಿದ್ದಾರೆ ಎಂದವರು ಹೇಳಿದರು.

ಎನ್‌ ಕೌಂಟರ್‌ ಮಾಡಬೇಕು
ಹಿಂದೂ ಕಾರ್ಯಕರ್ತರಾದ ದೀಪಕ್, ಪ್ರಶಾಂತ್ ಪೂಜಾರಿ, ಶರತ್‌ ಮಡಿವಾಳ್ ಕೊಲೆ ಆರೋಪಿಗಳು ಇದೀಗ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಹತ್ಯೆಗೈದ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕೆಂದು ಪೊಲೀಸ್ ಇಲಾಖೆ ಬಳಿ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ ದೇವಿ ಪ್ರಸಾದ್‌ ಶೆಟ್ಟಿ ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಗೊತ್ತಿದೆ ಎಂದರು. ಚೇತನ್‌ ಪೇರಲ್ಕೆ ಕಾರ್ಯಕ್ರಮ ನಿರೂಪಿಸಿದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!