Thursday, May 26, 2022
spot_img
Homeಸುದ್ದಿಬೋಳ : ಆಸ್ತಿ ತಕರಾರು - ನಾಲ್ವರಿಂದ ವ್ಯಕ್ತಿಗೆ ಹಲ್ಲೆ - ದೂರು

ಬೋಳ : ಆಸ್ತಿ ತಕರಾರು – ನಾಲ್ವರಿಂದ ವ್ಯಕ್ತಿಗೆ ಹಲ್ಲೆ – ದೂರು

ಕಾರ್ಕಳ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ಸೇರಿ ಹಲ್ಲೆ ನಡೆಸಿರುವುದಾಗಿ ಬೋಳ ಗ್ರಾಮದ ಬಿ. ವಿ. ದಿನೇಶ್‌ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ದಿನೇಶ್‌ ಅವರ ಚಿಕ್ಕಪ್ಪ ಶಿವರಾಮ್‌ ಆಚಾರ್ಯ ಅವರು ಫೆ.೧೭ ರಂದು ಮಹಾಲಚ್ಚಿಲ್‌ ಎಂಬಲ್ಲಿಯ ಜಾಗದ ಕುರಿತು ತಕರಾರು ತೆಗೆದಿದ್ದು, ಆ ಜಾಗದಲ್ಲಿ ಶಿವರಾಮ್‌ ಅವರು ಕೆಲಸ ಮಾಡಿಸುತ್ತಿದ್ದರು. ದಿನೇಶ್‌ ಅಲ್ಲಿಗೆ ಬಂದು ಕೆಲಸ ನಿಲ್ಲಿಸಲು ತಿಳಿಸಿದಾಗ ಶಿವರಾಮ್‌ ಕತ್ತಿ ಹಿಡಿದುಕೊಂಡು ಅವಾಚ್ಯ ಶಬ್ಧಗಳಿಂದ ಬೈದಿರುತ್ತಾರೆ. ಅಲ್ಲಿಗೆ ಧಾವಿಸಿದ ಶಿವರಾಮ ಅವರ ಮಗ ಅಭಿಷೇಕ್‌, ಮಗಳು ಅನುಷಾ, ಪತ್ನಿ ಜ್ಯೋತಿ ಸೇರಿ ಪೈಪಿನಿಂದ ಹಲ್ಲೆ ನಡೆಸಿರುತ್ತಾರೆ ಎಂದು ದಿನೇಶ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!