ಕಾರ್ಕಳ : ಫ್ರೆಂಡ್ಸ್ ಪವರ್ ಜಿಮ್ ಜೋಡುರಸ್ತೆ, ಜೇಸಿಐ ಕಾರ್ಕಳ, ಕುಲಾಲ ಯುವ ವೇದಿಕೆ ಇವರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ, ಜಿಲ್ಲಾ ರಕ್ತನಿಧಿ ಅಜ್ಜರಕಾಡು ಮತ್ತು ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಫೆ. 20ರಂದು ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಡಾ. ಕೆ. ಆರ್. ಜೋಶಿ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಳೆದ 4 ವರ್ಷಗಳಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ, ಆರೋಗ್ಯ ಶಿಬಿರ ನಡೆಸಿಕೊಂಡು ಬಂದಿದೆ. ಈ ಅವಧಿಯಲ್ಲಿ ಸುಮಾರು 2000 ಯೂನಿಟ್ ರಕ್ತ ಸಂಗ್ರಹವಾಗಿದೆ ಎಂದು ತಿಳಿಸಿದರು.
ಜೇಸಿಐ ಅಧ್ಯಕ್ಷ ಸಂತೋಷ ಕುಮಾರ್ ರೆಂಜಾಳ, ನಿಯೋಜಿತ ಅಧ್ಯಕ್ಷ ಡಾ. ಮುರಳೀಧರ ಭಟ್, ಜಿಲ್ಲಾ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ. ವೀಣಾ, ಭಾರತೀಯ ವೈದ್ಯಕೀಯ ಸಂಘದ ಡಾ. ಅನಂತ್ ಕಾಮತ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ವೃಷಭರಾಜ್ ಕಡಂಬ, ಫ್ರೆಂಡ್ಸ್ ಪವರ್ ಜಿಮ್ ನಿರ್ದೇಶಕ ಯೋಗೀಶ್ ಸಾಲಿಯಾನ್, ಮಹಮ್ಮದ್ ಆಲಿ, ಕುಲಾಲ ಯುವ ವೇದಿಕೆ ಅಧ್ಯಕ್ಷ ಉದಯ ಕುಲಾಲ, ಸಂಘದ ಕಾರ್ಯದರ್ಶಿ ಹರೀಶ್ ಕುಲಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಲಾಲ ಯುವವೇದಿಕೆ ಜಿಲ್ಲಾಧ್ಯಕ್ಷ ದಿವಾಕರ ಬಂಗೇರ ಸ್ವಾಗತಿಸಿ, ಶಿಕ್ಷಕಿ ಸಂಗೀತ ಕುಲಾಲ್ ಬೋಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.