ಕಾರ್ಕಳ : ಕಾರ್ಕಳ ಮಂಗಳೂರು ರಸ್ತೆಯಲ್ಲಿನ ನಿರ್ಮಲ ಬಿಲ್ಡಿಂಗ್‌ನಲ್ಲಿ ಫೆ. 20ರಂದು 7th ಹೆವೆನ್ ಕೇಕ್ ಶಾಪ್ ಶುಭಾರಂಭಗೊಂಡಿತು. ಸಚಿವ ವಿ. ಸುನಿಲ್ ಕುಮಾರ್ ದೀಪ ಬೆಳಗಿಸಿ ನೂತನ ಶಾಪ್ ಉದ್ಘಾಟಿಸಿದರು. ಉದ್ಯಮಿ ಬೋಳ ಪ್ರಭಾಕರ್ ಕಾಮತ್, ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ನಿರ್ಮಲ ಸಮೂಹ ಸಂಸ್ಥೆಗಳ ಮಾಲಕ ಗಣೇಶ್ ಕಾಮತ್, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ರವೀಂದ್ರ ನಾಯಕ್, ಉದ್ಯಮಿ ಮಹಾವೀರ ಹೆಗ್ಡೆ, ಚಂದ್ರಹಾಸ ರೈ, ಜಿ.ಪಂ. ನಿಕಟ ಪೂರ್ವ ಸದಸ್ಯ ಉದಯ ಕೋಟ್ಯಾನ್, ತಾ.ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಬಿಜೆಪಿ ನಗರಾಧ್ಯಕ್ಷ ರವೀಂದ್ರ ಮೊಯ್ಲಿ, ರಮೇಶ್ ಕಲ್ಲೊಟ್ಟೆ, ನೀರೆ ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ದೇವಾಡಿಗ, ಸದಸ್ಯ ಶಿವಪ್ರಸಾದ್ ರಾವ್, ವಿಕ್ರಂ ಹೆಗ್ಡೆ, ಸಚ್ಚಿದಾನಂದ ಪ್ರಭು ಮೊದಲಾದವರು ಉಪಸ್ಥಿತರಿದ್ದರು. ಮಾಲಕ ಶ್ರೀಚರಣ್ ಅತಿಥಿಗಳನ್ನು ಬರಮಾಡಿಕೊಂಡರು.
ಲೈವ್ ಕಿಚನ್
7th ಹೆವೆನ್ ಕೇಕ್ ಶಾಪ್‌ನಲ್ಲಿ ಲೈವ್ ಕಿಚನ್ ವ್ಯವಸ್ಥೆಯಿದ್ದು, 7 ನಿಮಿಷದಲ್ಲಿ ಗ್ರಾಹಕರಿಗೆ ಬೇಕಾದ ಪ್ಲೇವರ್‌ನಲ್ಲಿ ಕೇಕ್ ತಯಾರಿ ಮಾಡಿಕೊಡಲಾಗುವುದು. ಶುಭಾರಂಭದ ಪ್ರಯುಕ್ತ ಅರ್ಧ ಕೆ.ಜಿ. ಕೇಕ್ ಖರೀದಿಸಿದರೆ ಲಾವಾ ಕೇಕ್ ಉಚಿತ, ಒಂದು ಪೀಸ್ ಪೇಸ್ಟ್ರೀ ಖರೀದಿಸಿದರೆ ಒಂದು ಪೀಸ್ ಕೇಕ್ ಉಚಿತ, ಮಗ್ ಕೇಕ್ ಖರೀದಿಸಿದರೆ ಮಫಿನ್ ಉಚಿತವಾಗಿ ಪಡೆಯಬಹುದು. ಈ ಆಫರ್ ಮೂರು ದಿನಗಳವರೆಗೆ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ತಿಳಿಸಿದೆ. 7th ಹೆವೆನ್ ಕೇಕ್ ಶಾಪ್ ನಿಂದ ಹೋಂ ಡೆಲಿವರಿ ಸೌಲಭ್ಯವೂ ಇದೆ.