ಬೆಂಗಳೂರು: ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲೇ ಇದು ಕರಾಳ ದಿನ, ಕಾಂಗ್ರೆಸ್ ರಾಷ್ಟ್ರ ಧ್ವಜವನ್ನು ತನ್ನ ರಾಜಕೀಯ ಪ್ರತಿಭಟನೆಗಾಗಿ ಸದನದಲ್ಲಿ ಬಳಕೆ ಮಾಡಿಕೊಂಡು ಸದನ ಸಂವಿಧಾನ ಹಾಗೂ ತಿರಂಗ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ. ಧ್ವಜ ಸಂಹಿತೆಯ ಬಗ್ಗೆ ಸದನದಲ್ಲಿ ಗಂಟೆಗಳ ಕಾಲ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಸದನದಲ್ಲಿ ತಮ್ಮ ಪಕ್ಷದ ಶಾಸಕರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಾಗ ಮೌನಕ್ಕೆ ಜಾರಿದ್ದರು. ಇದು ಜಾಣ ಮೌನವೋ, ಅಸಹಾಯಕತೆಯೋ? ಎಂದು ಪ್ರಶ್ನಿಸಿದರು. ಸದನದ ನಿಯಮಾವಳಿ ಪ್ರಕಾರ ರಾಷ್ಟ್ರ ಧ್ವಜವನ್ನು ಸದನಕ್ಕೆ ತರುವಂತಿಲ್ಲ. ಆದರೆ ಕಾಂಗ್ರೆಸ್ ಶಾಸಕರು ರಾಷ್ಟ್ರ ಧ್ವಜವನ್ನು ಭಿತ್ತಿಪತ್ರದ ರೀತಿ ಬಳಸಿಕೊಂಡಿದ್ದಾರೆ. ಈ ದುರ್ವತನೆಗಾಗಿ ಕಾಂಗ್ರೆಸಿಗರು ಬೇಷರತ್ತಾಗಿ ಕ್ಷಮೆಯಾಚಿಸಬೇಕು ಕೇಳಬೇಕು ಎಂದು ಆಗ್ರಹಿಸಿದರು.
Recent Comments
ಕಗ್ಗದ ಸಂದೇಶ
on