ಕಾರ್ಕಳ : ಜೋಡುರಸ್ತೆಯ ಪ್ರೈಮ್ ಮಾಲ್ ನಲ್ಲಿ ಫೆ. 21ರ ಸೋಮವಾರ ಪ್ರೈಮ್ ಮಾರ್ಟ್ ಸೂಪರ್ ಮಾರ್ಕೆಟ್ ಶುಭಾರಂಭಗೊಳ್ಳಲಿದೆ. ಸಚಿವ ವಿ. ಸುನಿಲ್ ಕುಮಾರ್ ಸೂಪರ್ ಮಾರ್ಕೆಟ್ ಉದ್ಘಾಟಿಸಲಿರುವರು. ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ ಸಂಪತ್, ನ್ಯಾಯವಾದಿ ಸುವ್ರತ್ ಕುಮಾರ್, ಪವರ್ ಪಾಯಿಂಟ್ ಬ್ಯಾಗ್ ಇಂಡಸ್ಟ್ರೀಸ್ ಮಾಲಕ ಮಹಾವೀರ ಹೆಗಡೆ, ಸಿವಿಲ್ ಇಂಜಿನಿಯರ್ ದಿವಾಕರ ಶೆಟ್ಟಿ, ಪುರಸಭಾ ಸದಸ್ಯ ಅಶ್ಪಾಖ್ ಅಹ್ಮದ್ ಅತಿಥಿಗಳಾಗಿ ಭಾಗವಹಿಸಲಿರುವರು.
ಸೂಪರ್ ಮಾರ್ಕೆಟ್ ನಲ್ಲಿ ಗುಣಮಟ್ಟದ ಸಾಮಗ್ರಿಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿದೆ. ಗ್ರಾಹಕರಿಗೆ ವಿಶಾಲವಾದ ವಾಹನ ಪಾರ್ಕಿಂಗ್ ಸೌಲಭ್ಯವಿದೆ. ಶುಭಾರಂಭದ ಪ್ರಯುಕ್ತ ಕೂಪನ್ ನೀಡಲಾಗುತ್ತಿದ್ದು, ವಿಜೇತರಿಗೆ ಬಂಪರ್ ಬಹುಮಾನವಿದೆ. ಗ್ರಾಹಕರು ನಮ್ಮ ಸಂಸ್ಥೆಯನ್ನು ಬೆಂಬಲಿಸುವಂತೆ ಪಾಲುದಾರರಾದ ಸಂಪತ್ ಜೈನ್ ಮತ್ತು ಸಚಿನ್ ಪಿ. ಸಾಲಿಯಾನ್ ಮನವಿ ಮಾಡಿಕೊಂಡಿದ್ದಾರೆ.
ಫೆ. 21 : ಪ್ರೈಮ್ ಮಾರ್ಟ್ ಸೂಪರ್ ಮಾರ್ಕೆಟ್ ಶುಭಾರಂಭ
Recent Comments
ಕಗ್ಗದ ಸಂದೇಶ
on