Thursday, May 19, 2022
spot_img
Homeಸುದ್ದಿಜ್ಞಾನಸುಧಾ : ನೈವೇದ್ಯ ಸುಧಾ ಕಟ್ಟಡ ಉದ್ಘಾಟನೆ

ಜ್ಞಾನಸುಧಾ : ನೈವೇದ್ಯ ಸುಧಾ ಕಟ್ಟಡ ಉದ್ಘಾಟನೆ

ತಟ್ಟೆಗೆ ಬಿದ್ದ ಅನ್ನ ಎಂದೂ ವ್ಯರ್ಥವಾಗದಿರಲಿ – ಡಾ. ಎನ್.ಆರ್. ಶೆಟ್ಟಿ

ಕಾರ್ಕಳ : ಪ್ರಪಂಚದಲ್ಲಿ ಅದೆಷ್ಟೋ ಮಿಲಿಯನ್ ಜನ ಅನ್ನ, ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಹೀಗಾಗಿ ನಮ್ಮ ತಟ್ಟೆಗೆ ಬಿದ್ದ ಅನ್ನ ಎಂದೂ ಕೂಡಾ ವ್ಯರ್ಥವಾಗದಿರಲಿ. ಜೊತೆಗೆ ಕುಡಿಯುವ ನೀರಿಗೂ ಹಾಹಾಕಾರವಿರುವಾಗ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ, ಕಲಬುರ್ಗಿ ಕೇಂದ್ರೀಯ ವಿದ್ಯಾಲಯದ ಮಾಜಿ ಕುಲಾಧಿಪತಿ ಡಾ. ಎನ್.ಆರ್. ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಫೆ. 16ರಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ನೈವೇದ್ಯ ಸುಧಾ ಮೆಸ್ಸನ್ನು ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಜ್ಞಾನ ಸಂಜೀವಿನಿ ಹೆಲ್ತ್ ಕೇರ್ ಸೆಂಟರ್‌

ಕಾಲೇಜಿನಲ್ಲಿ ಜ್ಞಾನ ಸಂಜೀವಿನಿ ಹೆಲ್ತ್ ಕೇರ್ ಸೆಂಟರ್‌ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಅಶೋಕ್ ಅಡ್ಯಂತಾಯ, ಎನ್.ಆರ್.‌ ಶೆಟ್ಟಿ ಅವರದ್ದು ಆದರ್ಶ ವ್ಯಕ್ತಿತ್ವ. ಅವರ ಬೋಧನೆ ಕೌಶಲ್ಯ ಶಿಕ್ಷಕರಿಗೆ ಮಾದರಿಯೆಂದರು.

ಪ್ರಾಸ್ತವಿಕ ಮಾತುಗಳನ್ನಾಡಿದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಶೈಕ್ಷಣಿಕವಾಗಿ ಸಾಧನೆ ಮಾಡುವವರಿಗೆ ಡಾ. ಎನ್.ಆರ್. ಶೆಟ್ಟಿ ವ್ಯಕ್ತಿತ್ವ ಸ್ಫೂರ್ತಿದಾಯಕ. ಅವರ ಮಾರ್ಗದರ್ಶನದಲ್ಲಿ ನಾನು ಪಿಎಚ್‌ಡಿ ಮಾಡಿದೆ. ಅವರ ಆಶೀರ್ವಾದದಿಂದಲೇ ಜ್ಞಾನಸುಧಾ ಸಂ‍ಸ್ಥೆ ಉತ್ತಮ ಶೈಕ್ಷಣಿಕ ಸಂಸ್ಥೆ ಎಂದು ಗುರುತಿಸಿಕೊಳ್ಳುವಂತಾಗಿದೆ ಎಂದರು.

ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಪಿಜಿಇಟಿ ಟ್ರಸ್ಟಿಗಳಾದ ಕರುಣಾಕರ್ ಶೆಟ್ಟಿ, ವಿದ್ಯಾವತಿ ಶೆಟ್ಟಿ, ಬಳ್ಳಾರಿಯ ಎಂ.ಜಿ. ಗೌಡ್ ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಜೈನ್, ಪ್ರಕಾಶ್ ಶೆಣೈ, ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನ ಸುಧಾ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ದಿನೇಶ್ ಎಂ. ಕೊಡವೂರು, ಉಡುಪಿ ಜ್ಞಾನ ಸುಧಾ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ್ ಶೆಟ್ಟಿ, ಕಾರ್ಕಳ ಜ್ಞಾನ ಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಿನ್ಸಿಪಾಲ್ ಉಷಾ ರಾವ್ ಯು., ಪಿ.ಆರ್.ಒ ಜ್ಯೋತಿ ಪದ್ಮನಾಬ್ ಭಂಡಿ ಭಾಗವಹಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನೈವೇದ್ಯಾ ಕಟ್ಟಡ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!