ಕಾರ್ಕಳ : ನಗರದ ಪೆರ್ವಾಜೆ ರಸ್ತೆಯಲ್ಲಿರುವ ಸುವಿಧಾ ಹೋಮ್ಸ್ ಅಪಾರ್ಟ್ ಮೆಂಟ್ ಓನರ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಮಹೇಶ್ ಎಸ್. ಆಚಾರ್ಯ ಎಂಬವರು ಸಂಸ್ಥೆಯ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಯಿಂದ ಚೆಕ್ ಬಳಸಿ ಹಣ ನಗದೀಕರಿಸಿ ಮೋಸ ಮಾಡಿದ್ದಾರೆ ಎಂದು ಅಸೋಸಿಯೇಶನ್ ಅಧ್ಯಕ್ಷ ಉದಯ ನಾಯಕ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಮಹೇಶ್ ಆಚಾರ್ಯ ಕಮಿಟಿಗೆ ಸಂಬಂಧಪಟ್ಟ ಚೆಕ್‌ಬುಕ್, ಪಾಸ್‌ಬುಕ್, ನಿರ್ಣಯ ಪುಸ್ತಕ, ಮೊಹರು, ದಾಖಲೆ ಪುಸ್ತಕ, ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧಕರ ವರದಿ ಇತ್ಯಾದಿಗಳನ್ನು ಹಿಂತಿರುಗಿಸದೇ ದ್ರೋಹ ಮಾಡಿದ್ದಾರೆ ಉದಯ ನಾಯಕ್ ದೂರಿನಲ್ಲಿ ತಿಳಿಸಿದ್ದಾರೆ.
ಕಾರ್ಕಳ : ಅಪಾರ್ಟ್‌ಮೆಂಟ್ ಮಾಜಿ ಅಧ್ಯಕ್ಷನಿಂದ ಹಣ ದುರುಪಯೋಗ – ದೂರು
