Wednesday, July 6, 2022
spot_img
Homeರಾಜ್ಯಮುಂದಿನ 24 ಗಂಟೆಯಲ್ಲಿ ವಿವಿಧೆಡೆ ಮಳೆಯ ನಿರೀಕ್ಷೆ

ಮುಂದಿನ 24 ಗಂಟೆಯಲ್ಲಿ ವಿವಿಧೆಡೆ ಮಳೆಯ ನಿರೀಕ್ಷೆ

ಬೆಂಗಳೂರು : ರಾಜ್ಯದಲ್ಲಿ ಧಗೆ ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಸಂಜೆ 7 ಗಂಟೆ ಆದ್ರೂ ಸೆಕೆ ಕಡಿಮೆ ಆಗುತ್ತಿಲ್ಲ. ಮಧ್ಯಾಹ್ನದ ಬಿಸಿಲಿಗೆ ಜನರು ಹೈರಾಣು ಆಗುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಜನರು ತಂಪಾದ ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಲಿದೆ. ಬೆಂಗಳೂರು ಗ್ರಾ, ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ ಜಿಲ್ಲೆಗಳಲ್ಲಿ ಬೆಳಗಿನ ಜಾವ ಚಳಿಯ ಜೊತೆ ಮಂಜಿನಿಂದ ಕೂಡಿದ ವಾತಾವರಣ ಇರಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 29, ಕನಿಷ್ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಫೆ.17 ರಂದು ರಾಜ್ಯದ ವಿವಿಧೆಡೆ ಮಳೆ ಆಗುವ ನಿರೀಕ್ಷೆ ಇದ್ದು, ರಾಜ್ಯದ ವಿವಿಧೆಡೆ ಈ ಕೆಳಗಿನಂತೆ ಹವಾಮಾನ ವರದಿಯಾಗಿದೆ.


ರಾಜ್ಯದ ಜಿಲ್ಲಾವಾರು ಹವಾಮಾನ ವರದಿ :
ಮೈಸೂರು 31 ಗರಿಷ್ಠ – 18 ಕನಿಷ್ಠ, ಚಾಮರಾಜನಗರ 31-18, ರಾಮನಗರ 31-18, ಮಂಡ್ಯ 32-18, ಬೆಂಗಳೂರು ಗ್ರಾಮಾಂತರ 29-16, ಚಿಕ್ಕಬಳ್ಳಾಪುರ 28-16, ಕೋಲಾರ 29-15, ಹಾಸನ 30-17, ಚಿಕ್ಕಮಗಳೂರು 29-17, ದಾವಣಗೆರೆ 33-22, ಶಿವಮೊಗ್ಗ 33-21, ಕೊಡಗು 26-18, ತುಮಕೂರು 31-17, ಉಡುಪಿ 32-24, ಮಂಗಳೂರು 31-24, ಉತ್ತರ ಕನ್ನಡ 34-19, ಧಾರವಾಡ 33-20, ಹಾವೇರಿ 33-21, ಹುಬ್ಬಳ್ಳಿ 33-20, ಬೆಳಗಾವಿ 32-19, ಗದಗ 32-21, ಕೊಪ್ಪಳ 33-21, ವಿಜಯಪುರ 32-22, ಬಾಗಲಕೋಟ 33-22, ಕಲಬುರಗಿ 32-21, ಬೀದರ್ 30-19, ಯಾದಗಿರಿ 33-21, ರಾಯಚೂರ 33-21, ಬಳ್ಳಾರಿ 33ಗರಿಷ್ಠ – 21 ಕನಿಷ್ಠ ಡಿಗ್ರಿ ಸೆಲ್ಸಿಯಸ್‌ ವರದಿಯಾಗಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!