ಕಾರ್ಕಳ : ಹಾರ್ಜಡ್ಡು ಕ್ರಾಸ್ ಬಳಿ ಕಾರೊಂದು (KA-05-M P-6344) ಪಲ್ಟಿಯಾದ ಘಟನೆ ಫೆ. 15ರಂದು ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರೂ ಗಾಯಗೊಂಡಿದ್ದಾರೆ. ಬೆಂಗಳೂರಿನ ಬನಶಂಕರಿಯ ತೇಜಸ್, ಕೌಶಿಕ್, ನಾಗಶ್ರೀ ಮತ್ತು ವೈಷ್ಣವಿ ಮಾರುತಿ ವ್ಯಾಗನರ್ ಕಾರಿನಲ್ಲಿ ಬೆಂಗಳೂರಿನಿಂದ ಕಾರ್ಕಳ ಪ್ರವಾಸ ಬಂದಿದ್ದು, ಫೆ. 15ರಂದು ಹಿರ್ಗಾನ ಗ್ರಾಮದ ಹಾರ್ಜಡ್ಡು ಕ್ರಾಸ್ ಬಳಿ ಕಾರು ಅಪಘಾತಕ್ಕೀಡಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಕೌಶಿಕ್ ನ ಎಡಭುಜ, ಮುಖಕ್ಕೆ ಗಾಯವಾಗಿದೆ. ವೈಷ್ಣವಿ, ತೇಜಸ್, ನಾಗ ಶ್ರೀ ಅವರಿಗೆ ತರಚಿದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on