Tuesday, July 5, 2022
spot_img
Homeಸುದ್ದಿಈಶ್ವರಪ್ಪ ರಾಜಿನಾಮೆಗೆ ಪಟ್ಟು : ಕಲಾಪ ಮುಂದೂಡಿಕೆ

ಈಶ್ವರಪ್ಪ ರಾಜಿನಾಮೆಗೆ ಪಟ್ಟು : ಕಲಾಪ ಮುಂದೂಡಿಕೆ

ಬೆಂಗಳೂರು: ಫೆ.16 ರಂದು ನಡೆಯಬೇಕಿದ್ದ ಕಲಾಪ ಸಚಿವ ಈಶ್ವರಪ್ಪ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್‌ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟಿಸಿದ ಕಾರಣ ಮುಂದೂಡಲಾಗಿತ್ತು. ಇಂದು ಕೂಡಾ ಪರಿಷತ್ ನಲ್ಲಿ ಈಶ್ವರಪ್ಪ ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸಿದ್ದರ ಪರಿಣಾಮ ಕಲಾಪ ನಾಳೆಗೆ ಮುಂದೂಡಿಕೆಯಾಗಿದೆ.
ಫೆ.17 ರಂದು ಕಲಾಪ ಪ್ರಾರಂಭವಾಗುತ್ತಿದ್ದಂತೆ ಸದನದಲ್ಲಿ ಗಲಾಟೆ ಪ್ರಾರಂಭಿಸಿದ ಕೈ ನಾಯಕರು ಸದನದಲ್ಲಿ ಅಶಾಂತಿ ಉಂಟು ಮಾಡಿದ ಕಾರಣ ಸ್ಪೀಕರ್‌ ಕಾಗೇರಿ ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ.
ಈ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಹಿಜಾಬ್‌ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸದನದ ಮೂಲಕ ಎಲ್ಲರೂ ಸೇರಿ ಒಂದು ಸಂದೇಶವನ್ನು ನೀಡಬೇಕೆಂದು ಯೋಜಿಸಿದ್ದೆವು. ಆದರೆ ಕಾಂಗ್ರೆಸ್‌ ಕಲಾಪದ ಸಮಯವನ್ನು ಹಾಳು ಮಾಡುತ್ತಿದ್ದಾರೆ, ಶಾಂತಿ ನೆಲೆಸುವಂತೆ ಮಾಡುವುದು ನಮ್ಮ ಜವಾಬ್ದಾರಿ. ಜನರೂ ಕೂಡಾ ತಮ್ಮ ಸಮಸ್ಯೆಗಳ ಚರ್ಚೆ ಆಗುವುದನ್ನು ಕಾಯುತ್ತಾ ಇರುತ್ತಾರೆ. ಆದರೆ ಕಾಂಗ್ರೆಸ್‌ ಇದ್ಯಾವುದಕ್ಕೂ ಅನುವು ಮಾಡಿಕೊಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!