ಸೋನಿಪತ್: ಹರಿಯಾಣದ ಸೋನಿಪತ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಪಂಜಾಬಿ ನಟ ದೀಪ್ ಸಿಧು ಸಾವನ್ನಪ್ಪಿದ್ದಾರೆ ಎಂದು ಸೋನಿಪತ್ ಪೊಲೀಸರು ಖಚಿತಪಡಿಸಿದ್ದಾರೆ.
ಹರಿಯಾಣದ ಸೋನಿಪತ್ ನಲ್ಲಿ ಪಿಪ್ಲಿ ಟೋಲ್ ಸಮೀಪ ದೀಪ್ ಸಿಧು ಅವರ ಕಾರು ನಿಂತಿದ್ದ ಟ್ರಕ್ ಗೆ ಗುದ್ದಿದೆ. ಈ ಅಪಘಾತದಲ್ಲಿ ದೀಪ್ ಸಿಧು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ವರ್ಷ ರೈತರ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ನಟ ದೀಪ್ ಸಿಧು ಪ್ರಮುಖ ಆರೋಪಿಯಾಗಿದ್ದರು. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಗಣರಾಜ್ಯೋತ್ಸವ ದಿನದಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ವೇಳೆಯಲ್ಲಿ ಉಂಟಾದ ಹಿಂಸಾಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಫೆಬ್ರವರಿ 9 ರಂದು ಸಿಧುವನ್ನು ಬಂಧಿಸಲಾಗಿತ್ತು.