ಕಾರ್ಕಳ : ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುವ ಹೆಬ್ರಿ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಹೆಬ್ರಿ ಜನತೆ ಪ್ರೋತ್ಸಾಹ, ಶೇಖರ್ ಅವರ ಶ್ರಮದಿಂದಲೇ ಯಶಸ್ವಿಯಾಗುತ್ತಿದೆ ಎಂದು ಹೆಬ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಪ್ರಸಾದ್ ರಾವ್ ಹೇಳಿದರು.
ಅವರು ಅನಂತಪದ್ಮನಾಭ ಫ್ರೆಂಡ್ಸ್ ವತಿಯಿಂದ 4 ದಿನಗಳ ಕಾಲ ನಡೆದ 12ನೇ ವರ್ಷದ ಹೆಬ್ಬೇರಿ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ
ವಿವಿಧ ಕ್ಷೇತ್ರಗಳ ಸಾಧಕರಿಗೆ ಇದೇ ಸಂದರ್ಭದಲ್ಲ ಸನ್ಮಾನಿಸಲಾಯಿತು. ಇಂಡಿಯನ್ ಓವರ್ ಸೀಸ್ ಬ್ಯಾಂಕ್ನ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಟಿ.ಜಿ. ಆಚಾರ್ಯ, ಶಿಕ್ಷಕ ಸಮಾಜಸೇವಕ ಶಶಿಧರ್ ಶೆಟ್ಟಿ, ಹೆಬ್ರಿ ಭಗತ್ ಸಿಂಗ್, ಯುವ ವೇದಿಕೆಯ ಅಧ್ಯಕ್ಷ ವಿಜಯ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಸಶಸ್ತ್ರ ಮೀಸಲು ಪಡೆಯ ಎಎಸ್ಪಿ ರಾಘವೇಂದ್ರ, ಹೆಬ್ರಿ ಸಬ್ ಇನ್ಸ್ ಪೆಕ್ಟರ್ ಮಹೇಶ್ ಟಿ.ಎಂ., ವಿದ್ಯುತ್ ಗುತ್ತಿಗೆದಾರ ಶ್ರೀನಿವಾಸ್ ಹೆಬ್ಬಾರ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪುಟ್ಟಣ್ಣ ಭಟ್, ಹೆಬ್ರಿ ಅನಂತಪದ್ಮನಾಭ ಫ್ರೆಂಡ್ಸ್ ನ ಅವಿನಾಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಶಿಧರ್ ಶೆಟ್ಟಿ ವಂದಿಸಿದರು.
