ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಡಾರು ನಲ್ಲೂರು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ರಜತಮಹೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಫೆ. 15ರಂದು ಬಜಗೋಳಿಯ ಸ.ಹಿ.ಪ್ರಾ. ಶಾಲಾ ಮೈದಾನದಲ್ಲಿ ನಡೆಯಲಿದೆ.
ಮುಡ್ರಾಲು ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ. ರಾಮ್ ಭಟ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 8 ರಿಂದ ಪೂಜಾ ಕಾರ್ಯಕ್ರಮ ನೆರವೇರಲಿದೆ. ಪೂರ್ವಾಹ್ನ 10.30 ಗಂಟೆಗೆ ಮಹಾಪೂಜೆ, 11 ಗಂಟೆಗೆ ಪುರಮೆರವಣಿಗೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದೆ. 12:30ರಿಂದ ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 1:30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೆಜ್ಜೆಗಿರಿ ಮ್ಯೂಸಿಕಲ್ ಗ್ರೂಪ್ ಬಜಗೋಳಿ ಇವರಿಂದ ʼಕಾವ್ಯ ಗಾನ ಕುಂಚʼ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಜ್ಞಾನ ವಿಕಾಸಕೇಂದ್ರ ಸದಸ್ಯರಿಂದ ವಿವಿಧ ವಿನೋದಾವಳಿಗಳು ಜರುಗಲಿರುವುದು.
ಸಭಾ ಕಾರ್ಯಕ್ರಮ
ಪೂರ್ವಾಹ್ನ 11:30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿರುವರು.
ಸಚಿವ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ನಲ್ಲೂರು ಮಾರುತಿ ಎಸ್ಟೇಟ್ ಮಾಲಕ ಹುರ್ಲಾಡಿ ರಘುವೀರ ಎ. ಶೆಟ್ಟಿ, ಬಜಗೋಳಿ ಆರೂರ್ಸ್ ಕ್ಲಿನಿಕ್ ನ ಡಾ. ವೆಂಕಟಗಿರಿ ರಾವ್, ನಲ್ಲೂರು ಆದೇಕಿ ದೈವಸ್ಥಾನದ ಆಡಳಿತ ಮೊಕ್ತೇಸರ ವಜ್ರನಾಭ ಚೌಟ, ರಾಜ್ಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಮುಂಬೈ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ, ಮುಡ್ರಾಲು ಮುಡಾರು ಶ್ರೀದೇವಿ ಕ್ಯಾಶ್ಯೂ ಮಾಲಕ ಗಣೇಶ್ ಕಾಮತ್, ಮುಡಾರು ಗೋಳಿದಡಿ ಸದಾಶಿವ ಸಾಲಿಯಾನ್, ಬಜಗೋಳಿ ಶ್ರೀ ಸಾಯಿ ಸಭಾಭವನದ ಮಾಲಕ ಹರೀಶ್ ಸಾಲ್ಯಾನ್, ಮುಡಾರು ಗ್ರಾ. ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ, ನಲ್ಲೂರು ಗ್ರಾ.ಪಂ. ಅಧ್ಯಕ್ಷೆ ಕವಿತಾ ಸಂತೋಷ್, ಬಜಗೋಳಿ ಸಾಯಿಕೃಪಾ ಜ್ಯುವೆಲ್ಲರ್ಸ್ ಮಾಲಕ ಪ್ರಸಾದ್ ಸಿ. ಆಚಾರ್ಯ, ಎಸ್.ಕೆ.ಡಿ.ಆರ್.ಪಿ ಅಧ್ಯಕ್ಷ ಪ್ರವೀಣ್ ಹೆಗ್ಡೆ ಉಪಸ್ಥಿತರಿರುವರು.